ನೀತಾ ಅಂಬಾನಿಗೆ ಒಲಿದು ಬಂತು ಪ್ರತಿಷ್ಠಿತ ಪ್ರಶಸ್ತಿ: ಮ್ಯಾಸಚೂಸೆಟ್ಸ್‌ನ ಗವರ್ನರ್ ರಿಂದ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಲಯನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನೀತಾ ಅಂಬಾನಿ ಅವರನ್ನು ಮ್ಯಾಸಚೂಸೆಟ್ಸ್‌ನ ಗವರ್ನರ್ (Massachusetts Governor) ಮೌರಾ ಹೀಲಿ (Maura Healy) ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ದಾರ್ಶನಿಕ ನಾಯಕಿ, ಸಹಾನುಭೂತಿಯ ಲೋಕೋಪಕಾರಿ ಮತ್ತು ನಿಜವಾದ ಜಾಗತಿಕ ಬದಲಾವಣೆಯ ಹರಿಕಾರ ಅಂತ ಬಣ್ಣಿಸಿರೋ ಗವರ್ನರ್ ಮೌರಾ ಹೀಲಿ, ನೀತಾ ಅಂಬಾನಿಯವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿದ್ದು ಸಂತಸ ತಂದಿದೆ ಅಂತ ಅಭಿಪ್ರಾಯಪಟ್ಟರು.

ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ, ಸಂಸ್ಕೃತಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ನೀತಾ ಅಂಬಾನಿ ಅವರ ಕಾರ್ಯ ಹಾಗೂ ಕೊಡುಗೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯ ಗೌರವವನ್ನು ನೀಡಲಾಗಿದೆ.

ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುಂದರವಾದ ಕೈಯಿಂದ ನೇಯ್ದ ಶಿಕರ್ಗಾ ಬನಾರಸಿ ಸೀರೆಯನ್ನು ಧರಿಸಿ ನೀತಾ ಅಂಬಾನಿ ಆಗಮಿಸಿದರು. ಶಿಕರ್ಗಾ ಬನಾರಸಿ ಸೀರೆಯು ಸಂಕೀರ್ಣವಾದ ಕಡ್ವಾ ನೇಯ್ಗೆ ಮತ್ತು ಸಾಂಪ್ರದಾಯಿಕ ಕೊನ್ಯಾ ವಿನ್ಯಾಸವನ್ನು ಒಳಗೊಂಡ ಭಾರತೀಯ ಕರಕುಶಲತೆಯ ಒಂದು ಮೇರುಕೃತಿಯಾಗಿದೆ. ಈ ಮೂಲಕ, ನೀತಾ ಅಂಬಾನಿ ಭಾರತದ ಶ್ರೀಮಂತ ಕಲಾತ್ಮಕ ಪರಂಪರೆಯನ್ನು ಅಮೆರಿಕದಾದ್ಯಂತ ಪಸರಿಸಿದರು.

ಇಂಡಿಯಾ ಬಿಸಿನೆಸ್ ಲೀಡರ್ ಅವಾರ್ಡ್‌ನ 20 ನೇ ಆವೃತ್ತಿಯಲ್ಲಿ ಪ್ರತಿಷ್ಠಿತ ‘ಬ್ರಾಂಡ್ ಇಂಡಿಯಾಕ್ಕೆ ಅತ್ಯುತ್ತಮ ಕೊಡುಗೆ’ ಪ್ರಶಸ್ತಿಯನ್ನು ನೀತಾ ಅಂಬಾನಿಯವರಿಗೆ ನೀಡಲಾಗಿದೆ. ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆ ವೇದಿಕೆ (ಯುಎಸ್‌ಐಎಸ್‌ಪಿಎಫ್) ಕೂಡ ಅಂಬಾನಿಗೆ ಲೋಕೋಪಕಾರ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ 2023 ರ ಜಾಗತಿಕ ನಾಯಕತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!