ಹೊಸದಿಗಂತ ಬೆಂಗಳೂರು :
ಲಾಭರಹಿತ ಸಂಸ್ಥೆಯಾದ ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್ ‘ ಹಿರಿಯರ ಆರೈಕೆ’ ಕುರಿತಾದ ಉಚಿತ ತರಬೇತಿ ಹಾಗೂ ಸರ್ಟಿಫಿಕೇಟ್ ಶಿಬಿರವನ್ನು ಆಯೋಜಿಸುತ್ತಿದೆ. ಡಿಮೆನ್‌ಶಿಯಾ ಸೇರಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ವ್ಯಕ್ತಿಗಳ ಆರೈಕೆಯ ಕುರಿತು ಉತ್ತಮ ತರಬೇತಿಯನ್ನು ನೀಡುವ ಒಂದು ತಿಂಗಳ ಉಚಿತ ಕಾರ್ಯಕ್ರಮ ಇದಾಗಿದೆ. ಎನ್‌ಎಮ್‌ಟಿ 1998ರಿಂದಲೂ ಹಿರಿಯ ಆರೈಕೆ ಸೇವೆಯನ್ನು ನೀಡುತ್ತಾ ಬಂದಿದೆ.
ಹಿರಿಯ ವ್ಯಕ್ತಿಗಳ ಆರೈಕೆಗೆ ಉತ್ತಮ ಸಹಾಯಕರ ಹಾಗೂ ತಜ್ಞರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ, ಎನ್‌ಎಮ್ ಟಿ ( ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್) ಬೆಡ್‌ಸೈಡ್ ಅಸಿಸ್ಟೆನ್ಸ್ ನಲ್ಲಿ ನೌಕರಿ ಆಧಾರಿತ ತರಬೇತಿಯನ್ನು ಈ ಕಾರ್ಯಕ್ರಮ ನೀಡುತ್ತಿದೆ. ಹಿರಿಯರ ಆರೈಕೆಯಲ್ಲಿ ಆಸಕ್ತಿ ಇರುವ ಹಾಗೂ ಕನಿಷ್ಟ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ಮತ್ತು 18-45 ವರ್ಷ ವಯಸ್ಸಿನ ಒಳಗಿನ ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.
ಕಾರ್ಯಕ್ರಮದ ಪ್ರಮುಖಾಂಶ
ಆರೋಗ್ಯ ಸೇವೆ ಕ್ಷೇತ್ರದಲ್ಲಿ ಉತ್ತಮ ಅನುಭವ
ಉದ್ಯೋಗ ಪಡೆಯುವಲ್ಲಿ ನೆರವು
5000 ರೂಗಳ ಸ್ಟೈಪಂಡ್
ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್‌ನಿಂದ ಡ್ಯುಯಲ್ ಸರ್ಟಿಫಿಕೆಟ್
ಈ ಕಾರ್ಯಕ್ರಮವು ಶಿಬಿರಾರ್ಥಿಗೆ ‘‘ಆರೈಕೆ’ ಕ್ಷೇತ್ರದಲ್ಲಿ ಉತ್ತಮ ಕೌಶಲ್ಯವನ್ನು ನೀಡುವುದಲ್ಲದೇ ಹಿರಿಯರ ಆರೈಕೆಗೆ ಇರುವ ಬೇಡಿಕೆಯ ಅಂತರವನ್ನು ತಗ್ಗಿಸುವುತ್ತದೆ ಎಂದು ಎನ್‌ಎಮ್‌ಟಿಯ ವಕ್ತಾರರು ತಿಳಿಸಿದ್ದಾರೆ.
ಆಸಕ್ತರು 080 42426565 / +91 8050159091 ಮೂಲಕ ಅಥವಾ ಬೆಂಗಳೂರಿನ ಬಾಣಸವಾಡಿಯ, ಕಸ್ತೂರಿನಗರ 3ನೇ ಅಡ್ಡರಸ್ತೆ 8P6 ನಲ್ಲಿರುವ ಎನ್‌ಎಮ್‌ಟಿ ಕಚೇರಿಗೆ ಬಂದು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಆಸಕ್ತರು ಆಧಾರ್/ ವೋಟರ್ ಗುರುತಿನ ಚೀಟಿ, ಶಾಲೆ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಮತ್ತು 2 ಪಾಸ್‌ಪೋರ್ಟ್ ಸೈಜ್ ಫೋಟೊವನ್ನು ಕಡ್ಡಾಯವಾಗಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ www.nightingaleseldercare.com ಭೇಟಿ ನೀಡಬಹುದಾಗಿದೆ.