ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮತ್ತೆ ವಕ್ಕರಿಸಿಕೊಂಡಿರುವ ಕೋವಿಡ್ ಆತಂಕ ಒಂದೆಡೆಯಾದರೆ ಇನ್ನೊಂದೆಡೆ ರಾಜ್ಯದ ರಾಜಧಾನಿ ಬೆಂಗಳೂರು ಕರ್ನಾಟಕದ ಹಾಟ್ಸ್ಪಾಟ್ ಆಗುತ್ತಿದೆಯಾ ಎಂಬ ಆತಂಕ ಇನ್ನೊಂದೆಡೆ.
ಇದಕ್ಕೆ ಕಾರಣವಾಗಿರುವುದು ಕಳೆದ 24 ತಾಸುಗಳಲ್ಲಿ ಪತ್ತೆಯಾಗಿರುವ ಹೊಸ ಪ್ರಕರಣಗಳು. ರಾಜ್ಯದಲ್ಲಿ ಒಂದೇ ದಿನ ದಾಖಲಾಗಿರುವ 22 ಸಕ್ರಿಯ ಪ್ರಕರಣಗಳಲ್ಲಿ ಬರೋಬ್ಬರಿ 19 ಪ್ರಕರಣಗಳು ಕೇವಲ ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಇದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
ಈ ನಡುವೆ ಪಾಲಿಸುವುದು. ಕ್ವಾರಂಟೈನ್ ಇರುವವರ ಮೇಲೆ ಹೆಚ್ಚು ನಿಗಾ, ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸುವುದು, ಐಎಲ್ಐ, ಸಾರಿ ಕೇಸ್ ಪತ್ತೆಹಚ್ಚಿ ಟೆಸ್ಟ್ ಮಾಡುವುದು. ನೆರೆಯ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡುವುದು ಹೀಗೆ ಹಲವು ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೆತ್ತಿಕೊಂಡಿದೆಯಾದರೂ ಏರಿಕೆಯಾಗುತ್ತಿರುವ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಾತ್ರ ಈಗ ಸಿಲಿಕಾನ್ ಸಿಟಿಯನ್ನು ಹೈರಾಣಾಗಿಸಿದೆ.