ಗೋಲ್ಡನ್ ಟೆಂಪಲ್ ನಲ್ಲಿ Air defence guns ಅಳವಡಿಸಿಲ್ಲ: ಭಾರತೀಯ ಸೇನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು ಗೋಲ್ಡನ್ ಟೆಂಪಲ್ ಒಳಗೆ ಎಡಿ ಬಂದೂಕುಗಳನ್ನು ನಿಯೋಜಿಸಲಾಗಿದೆ ಎಂಬ ವರದಿಗಳನ್ನು ಭಾರತೀಯ ಸೇನೆಯು ನಿರಾಕರಿಸಿದೆ.

ಗೋಲ್ಡನ್ ಟೆಂಪಲ್ ಆವರಣದಲ್ಲಿ air defence guns ಮತ್ತಿತರ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿರಲಿಲ್ಲ ಎಂದು ಭಾರತೀಯ ಸೇನೆ ಮಂಗಳವಾರ ಹೇಳಿದೆ.

ಪಾಕಿಸ್ತಾನದಿಂದ ಸಂಭಾವ್ಯ ಡ್ರೋನ್ ಮತ್ತು ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ದೇಗುಲದೊಳಗೆ air defence guns ಅಳವಡಿಕೆಗೆ ಗೋಲ್ಡನ್ ಟೆಂಪಲ್ ಆಡಳಿತವು ಸೇನೆಗೆ ಅನುಮತಿ ನೀಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.

ಗೋಲ್ಡನ್ ಟೆಂಪಲ್‌ನಲ್ಲಿ ವಾಯು ರಕ್ಷಣಾ ಗನ್‌ಗಳ ಅಳವಡಿಕೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶ್ರೀ ದರ್ಬಾರ್ ಸಾಹಿಬ್ ಅಮೃತಸರ (ಗೋಲ್ಡನ್ ಟೆಂಪಲ್) ಆವರಣದಲ್ಲಿ ಯಾವುದೇ AD ಗನ್ ಅಥವಾ ಯಾವುದೇ ವಾಯು ರಕ್ಷಣಾ ಸಂಪನ್ಮೂಲ ಅಳವಡಿಕೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!