ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋಕೆ ಚಾನ್ಸೇ ಇಲ್ಲ, ಗ್ಯಾರೆಂಟಿಗಳ ಮೂಲಕ ಜನರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ಗೆ ಯಾಕೆ ವೋಟ್ ಮಾಡ್ತಾರೆ? ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 200 ಸ್ಥಾನಕ್ಕೆ ಸ್ಪರ್ಧಿಸಿ ಸರ್ಕಾರ ಮಾಡುತ್ತೇವೆ ಎನ್ನುತ್ತಾರೆ. ಲೋಕಸಭೆಯ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸುತ್ತಿಲ್ಲ. ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡದೇ ಅವರು ಅಧಿಕಾರಕ್ಕೆ ಹೇಗೆ ಬರುತ್ತಾರೆ? ಎಂದು ಪ್ರಶ್ನಿಸಿದರು.
ರಾಜ್ಯ ಈಗ ಕೊಡುತ್ತಿರುವ ಗ್ಯಾರೆಂಟಿ ಗಳಗಂಟಿಯಾಗಿದ್ದಾವೆ. ಗೃಹಲಕ್ಷ್ಮಿ ಯೋಜನೆ ಎಷ್ಟು ಜರಿಗೆ ತಲುಪಿದೆ. ಬೆಂಗಳೂರು ಬಿಟ್ಟಿದೆ. ಊರುಗಳಿಗೆ ಬಂದಿಲ್ಲ. ಕೇವಲ ಪ್ರಗತಿಯಲ್ಲಿದೆ ಅಂತ ಹೇಳುತ್ತಾರೆ. ಬಹುತೇಕರಿಗೆ ಗ್ಯಾರೆಂಟಿ ತಲುಪುತ್ತಿಲ್ಲ ಎಂದು ಹೇಳಿದರು.