ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: ಯಥಾಸ್ಥಿತಿ ಕಾಯ್ದಿರಿಸಿದ ಆರ್‌ಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿ ಸಭೆ ಮುಕ್ತಾಯಗೊಂಡಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧರಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿ, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಬಡ್ಡಿದರ ಶೇಕಡಾ 6.50ರಲ್ಲೇ ಮುಂದುವರಿಯಲಿದೆ ಎಂದರು.

ರಿವರ್ಸ್‌ ರೆಪೋ ದರದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದರು. ಸಾಲಗಾರರಿಗೂ ಇದೊಂದು ಸಂತಸದ ಸುದ್ದಿಯಾದರೂ..ಬ್ಯಾಂಕ್‌ಗಳಿಂದ ಅಗ್ಗದ ಸಾಲಕ್ಕಾಗಿ ಕಾಯುತ್ತಿದ್ದ ಜನರಿಗೆ ನಿರಾಸೆಯಾಗಿದೆ. ವಿತ್ತೀಯ ನೀತಿ ಸಮಿತಿ ಮೂರು ದಿನದಿಂದ ನಡೆಸಿದ ಸಭೆಯಲ್ಲಿ, ಬಡ್ಡಿ ದರವನ್ನು ಶೇಕಡಾ 6.5ರಲ್ಲೇ ಮುಂದುವರೆಸಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಹಣದುಬ್ಬರ ಏರಿಕೆಯಾಗುವ ಸಾಧ್ಯತೆ
ರಿಸರ್ವ್ ಬ್ಯಾಂಕ್ 2024 ರ ಹಣಕಾಸು ವರ್ಷದಲ್ಲಿ ಹಣದುಬ್ಬರ ದರದ ಮುನ್ಸೂಚನೆಯನ್ನು ಹೆಚ್ಚಿಸಿದೆ. 2023-24 ರ ಹಣಕಾಸು ವರ್ಷದಲ್ಲಿ ಹಣದುಬ್ಬರ ದರವು 5.4 ಶೇಕಡಾ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಮೊದಲು ಶೇಕಡಾ 5.1 ರಷ್ಟಿತ್ತು. ಹಣದುಬ್ಬರ ದರದ ಮೇಲೆ ಹಣಕಾಸು ನೀತಿ ಸಮಿತಿ ನಿಗಾ ಇಡಲಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಜಿಡಿಪಿ ಬೆಳವಣಿಗೆಯ ಬಗ್ಗೆ ಮುನ್ಸೂಚನೆ
ಆರ್‌ಬಿಐ 2024ರ ಹಣಕಾಸು ವರ್ಷದಲ್ಲಿ GDP 6.50ರಷ್ಟು ಬೆಳವಣಿಗೆಯ ಮುನ್ಸೂಚನೆ ನೀಡಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆಯ ಹೊರತಾಗಿಯೂ, ಪ್ರಸ್ತುತ ಅವಧಿಯಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆಯ ದರವು ಪ್ರಬಲವಾಗಿದೆ. ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತವು ಇತರ ಯಾವುದೇ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದರು.

ಪ್ರಸ್ತುತ ನೀತಿ ದರಗಳು
ಆರ್‌ಬಿಐ ಗವರ್ನರ್ ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗದೆ 6.50ರಲ್ಲೇ ಮುಂದುವರಿಯಲಿದೆ. ರಿವರ್ಸ್ ರೆಪೊ ದರವು 3.35 ಶೇಕಡಾದಲ್ಲಿ ಬದಲಾಗದೆ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!