ಮುಂಬರಲಿರುವ ಚುನಾವಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲ್ಲ: ನಿಖಿಲ್ ಕುಮಾರಸ್ವಾಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮುಂಬರುವ 2024ರ ಲೋಕಸಭಾ ಇಲ್ಲವೇ 2028ರ ವಿಧಾನಸಭಾ ಚುನಾವಣೆ ಬಗ್ಗೆ ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ರಾಮನಗರದ ಪರಾಜಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ಗುರುವಾರ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಪ್ರಸಕ್ತ ವಿಧಾನಸಭೆಯಲ್ಲೂ ಸೋತರು. ಆದರೆ ತಾನು ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದಿರುವ ಅವರು, ಮುಂಬರಲಿರುವ ಲೋಕಸಭೆ ಮತ್ತು 2028ರ ವಿಧಾನಸಭೆ ಚುನಾವಣೆ ಬಗ್ಗೆ ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.

ಅಧಿಕಾರ ಇಲ್ಲದಿದ್ದರೂ ಇಲ್ಲಿನ ಜನರಿಗೆ ಸೇವೆ ಮಾಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸರ್ಧೆ ಮಾಡುವ ವಿಚಾರ ಚಿಂತನೆ, ಪ್ರಶ್ನೆ ನನ್ನಲ್ಲಿ ಇಲ್ಲ. ಸದ್ಯ ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ಬಗ್ಗೆ ರಾಜ್ಯದ ಜನತೆಗೆ ತಿಳಿಸುವ ಒತ್ತಡದಲ್ಲಿದ್ದರು. ಹೀಗಿದ್ದರೂ ಸಹ ಚನ್ನಪಟ್ಟಣ ಜನ ನಮ್ಮನ್ನು ಕೈ ಬಿಡಲಿಲ್ಲ ಎಂದು ಮತದಾರರಿಗೆ ಅವರು ಅಭಿನಂದನೆ ತಿಳಿಸಿದರು.

ಚುನಾವಣೆ ಅಂದಮೇಲೆ ಅಲ್ಲಿ ಯಾರದರೂ ಒಬ್ಬರು ಗೆಲ್ಲಲೇಬೇಕು. ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ. ಯಾವ ಕಾರಣಕ್ಕೂ ರಾಮನಗರ ಬಿಡುವ ಪ್ರಶ್ನೆಯೇ ಇಲ್ಲ, ಕಾರ್ಯಕರ್ತರು ಎದೆಗುಂದಲೂ ನಾನು ಬಿಡುವುದಿಲ್ಲ. ನನಗೆ ರಾಮನಗರದಲ್ಲಿ 76 ಸಾವಿರಕ್ಕೂ ಹೆಚ್ಚು ಮತಗಳನ್ನು ಜನ‌ ನೀಡಿದ್ದಾರೆ. ತಾಂತ್ರಿಕವಾಗಿ ನಾನು ಚುನಾವಣೆಯಲ್ಲಿ‌ ಸೋತಿರಬಹುದು ಆದರೆ, ಕ್ಷೇತ್ರದ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಎಚ್‌.ಡಿ.ದೇವೇಗೌಡರು ಕಟ್ಟಿರುವ ಪಕ್ಷವನ್ನ ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ. 2028ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯಲು ಸಿದ್ಧವಿದ್ದರೆ ಆ ಬಗ್ಗೆ ಆಗ ಕಾರ್ಯಕರ್ತರಲ್ಲಿ ಚರ್ಚಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!