ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಶೀಲ್ಡ್ ಉತ್ಪಾದನೆಯನ್ನು 2021 ರಲ್ಲಿಯೇ ಸ್ಥಗಿತಗೊಳಿಸಲಾಗಿದೆ ಎಂದು ಲಸಿಕೆ ತಯಾರಕ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಹೇಳಿದ್ದಾರೆ.
ಪುಣೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಲಸಿಕೆ ತಯಾರಕರ ನೆಟ್ವರ್ಕ್ನ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಉತ್ಪಾದನೆ ಸ್ಥಗಿತದ ವೇಳೆ ದಾಸ್ತಾನಿರಿಸಲಾದ ಸುಮಾರು 100 ಮಿಲಿಯನ್ ಡೋಸ್ ಲಸಿಕೆಯ ಅವಧಿ ಈಗಾಗಲೇ ಮುಗಿದಿದೆ. ಸಾಂಕ್ರಾಮಿಕ ರೋಗ ಹಾಗೂ ಲಸಿಕೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ಬೂಸ್ಟರ್ ಡೋಸ್ಗಳಿಗೆ ಬೇಡಿಕೆಯಿಲ್ಲ ಎಂದು ಹೇಳಿದರು.