ಹೊಸದಿಗಂತ ಡಿಜಿಟಲ್ ಡೆಸ್ಕ್;
ಉತ್ತರಾಖಂಡದ ವಿಶ್ವಪ್ರಸಿದ್ಧ ಚಾರ್‌ಧಾಮ್ ಯಾತ್ರೆಗೆ ನೋಂದಾಯಿಸಿಕೊಂಡಿದ್ದ 77 ಪಾಕಿಸ್ತಾನಿ ಹಿಂದು ಯಾತ್ರಿಕರಿಗೆ ನಿಷೇಧ ಹೇರಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯ ನಂತರ’ಬದಲಾದ ಭದ್ರತಾ ಪರಿಸ್ಥಿತಿ’ಯ ನೇರ ಪರಿಣಾಮ ಈ ನಿರ್ಧಾರ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಜೊತೆಗೆ, ಈ ವರ್ಷದ ಯಾತ್ರೆಗೆ ಯುನೈಟೆಡ್ ಸ್ಟೇಟ್ಸ್, ನೇಪಾಳ ಮತ್ತು ಮಲೇಷ್ಯಾ ಸೇರಿದಂತೆ ಇತರ ಹಲವು ದೇಶಗಳಿಂದಲೂ ನೋಂದಣಿ ಮಾಡಲಾಗಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ಯಾತ್ರಾ ವಿಭಾಗದ ಮೂಲಗಳು ದೃಢಪಡಿಸಿವೆ.
ಏಪ್ರಿಲ್ 30 ರಿಂದ ಪ್ರಾರಂಭವಾಗುವ ಚಾರ್‌ಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿ 21 ಲಕ್ಷ ಮೀರಿದೆ ಎಂದು ಯಾತ್ರಾ ನೋಂದಣಿ ವಿಭಾಗದ ಪ್ರದೀಪ್ ಚೌಹಾಣ್ TNIE ಗೆ ತಿಳಿಸಿದ್ದಾರೆ. ಇವರಲ್ಲಿ 24,729 ವಿದೇಶಿ ಪ್ರಜೆಗಳು ಯಾತ್ರೆ ಕೈಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 77 ಮಂದಿ ಪಾಕಿಸ್ತಾನದವರಿದ್ದಾರೆಎಂದು ಅವರು ಹೇಳಿದ್ದಾರೆ.