ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದೂರಾಗಿದ್ದಾರೆ. ಅಧಿಕೃತವಾಗಿ ಡಿವೋರ್ಸ್ ಪಡೆಯದಿದ್ದರೂ ಇಬ್ಬರು ಒಟ್ಟಿಗೇ ಇಲ್ಲ. ಇದಕ್ಕೆ ಕಾರಣ ಅಭಿಷೇಕ್ ಅಫೇರ್ ಎನ್ನಲಾಗಿದೆ.
ಮನೆಯಲ್ಲಿ ಮಿಸ್ ಇಂಡಿಯಾ ಇದ್ದರೂ ಇನ್ನೊಬ್ಬರ ಜತೆ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಐಶ್ವರ್ಯಾ ಫ್ಯಾನ್ಸ್ ಗರಂ ಆಗಿದ್ದಾರೆ. ಈ ಮಧ್ಯೆ ಐಶ್ವರ್ಯಾ ಹಾಗೂ ಅಭಿಷೇಕ್ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಐಶ್ವರ್ಯಾ ತಮ್ಮ ಪುತ್ರಿ ಜೊತೆಗೆ ಮಾತ್ರ ಓಡಾಡುತ್ತಿದ್ದು, ಇಡೀ ಬಚ್ಚನ್ ಕುಟುಂಬವನ್ನು ದೂರ ಇಟ್ಟಿದ್ದಾರೆ.
ಆರಾಧ್ಯ ತಮ್ಮ 13ನೇ ವರ್ಷದ ಬರ್ಥ್‌ಡೇ ಆಚರಿಸಿಕೊಂಡಿದ್ದು, ಅದರಲ್ಲಿ ಕೂಡ ಬಚ್ಚನ್ ಫ್ಯಾಮಿಲಿ ಭಾಗಿಯಾಗಿಲ್ಲ. ಬಚ್ಚನ್ ಫ್ಯಾಮಿಲಿಗೆ ಐಶ್ವರ್ಯಾ ಇನ್ವೈಟ್ ಮಾಡಿಲ್ಲ ಎಂದು ಹೇಳಲಾಗಿದೆ.
ಐಶ್ವರ್ಯಾ ರೈ ಅವರು ಮಗಳಿಗೆ ವಿಶ್ ಮಾಡಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರಾಧ್ಯಾ ಅವರು ಸಿಂಪಲ್ ಡ್ರೆಸ್ನಲ್ಲಿ ಗಮನ ಸೆಳೆದಿದ್ದಾರೆ. ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅವರ ಫೋಟೋ ಎದುರು ಆರಾಧ್ಯಾ ನಮಸ್ಕರಿಸುತ್ತಿದ್ದಾರೆ.
ಐಶ್ವರ್ಯಾ ರೈ ಕೂಡ ತಂದೆಯ ಆಶೀರ್ವಾದ ಪಡೆದಿದ್ದಾರೆ. ಈ ಬರ್ತ್ಡೇ ಪಾರ್ಟಿಲಿ ಕೆಲವೇ ಕೆಲವರು ಭಾಗಿ ಆಗಿದ್ದರು. ಐಶ್ವರ್ಯಾ, ಆರಾಧ್ಯಾ ಹಾಗೂ ಐಶ್ವರ್ಯಾ ತಾಯಿ ಇರುವ ಫೋಟೋ ಇದೆ. ಎಲ್ಲಿಯೂ ಬಚ್ಚನ್ ಕುಟುಂಬದವರು ಇಲ್ಲ.