ಕಾಫಿನಾಡಿನಲ್ಲಿ ಆರು ದಿನ ಟೂರಿಸ್ಟ್‌ಗೆ ನೋ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸವರ್ಷಾಚರಣೆಗೆ ಜನರು ಪ್ರೇಕ್ಷಣೀಯ ಸ್ಥಳಗಳಿಗೆ ಗುಂಪು ಗುಂಪಾಗಿ ತೆರಳೋದು ಮಾಮೂಲು. ಹೊಸ ವರ್ಷದ ಹಿಂದಿನ ದಿನ ಹಾಗೂ ಜನವರಿ 1ರಂದು ಎಲ್ಲೆಡೆ ಹೆಚ್ಚು ಜನರಿರೋ ಕಾರಣ ಕೆಲವರು ಡಿಸೆಂಬರ್ ಕಡೆಯ ವಾರದಲ್ಲಿ ಟ್ರಿಪ್‌ಗೆ ಮುಂದಾಗುತ್ತಾರೆ. ಆದರೆ ಚಿಕ್ಕಮಗಳೂರು ಭಾಗಕ್ಕೆ ಟ್ರಿಪ್ ಹೋಗೋದಾದ್ರೆ ಇದನ್ನು ಓದಿ..

ಕಾಫಿನಾಡಿನಲ್ಲಿ ಇಂದಿನಿಂದ ಆರು ದಿನ ಟೂರಿಸ್ಟ್‌ಗಳನ್ನು ಹಾಗೂ ಮೂರು ದಿನ ಲಿಕ್ಕರ್ ಬಂದ್ ಮಾಡಲಾಗುತ್ತದೆ. ದತ್ತಜಯಂತಿ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ.

ಮುಳ್ಳಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾಗೆ ಪ್ರವಾಸಿಗರು ಪ್ರವೇಶಿಸುವಂತಿಲ್ಲ. ಇಂದಿನಿಂದ ಡಿಸೆಂಬರ್ ೨೭ರವರೆಗೆ ಎಲ್ಲಾ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ನಾವು ಈಗಾಗಲೇ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ಬುಕ್ ಮಾಡಿದ್ದೇವೆ ಎನ್ನುವ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸಬಹುದು. ಆದರೆ ಹೋಮ್ ಸ್ಟೇಯಲ್ಲೇ ಇರಬೇಕು, ಮೇಲೆ ಹೆಸರಿಸಿದ ಪ್ರವಾಸಿಗರ ತಾಣಕ್ಕೆ ತೆರಳುವಂತಿಲ್ಲ.

ಇದರಿಂದಾಗಿ ಕಾಫಿನಾಡು ಭಾಗದ ಜನತೆ ನಿಟ್ಟುಸಿರುಬಿಟ್ಟಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದಲೂ ಚಿಕ್ಕಮಗಳೂರಿಗೆ ಚಾರಣಕ್ಕೆ ಬರುತ್ತಾರೆ, ಆದರೆ ಅದರಿಂದ ಕೊರೋನಾ ಭೀತಿ ಎದುರಾಗುತ್ತಿತ್ತು. ಈಗ ಕೊರೋನಾ ಆತಂಕ ದೂರವಾಗಿದೆ ಎನ್ನುತ್ತಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್‌ಆರ್‌ಪುರದಲ್ಲಿ ಮೂರು ದಿನ ಮದ್ಯ ನಿಷೇಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!