ಎಕ್ಸಿಟ್‌ ಪೋಲ್‌ ಬಗ್ಗೆ ನಂಬಿಕೆ ಇಲ್ಲ, ನಾವು ಡಬಲ್ ಡಿಜಿಟ್ ದಾಟುತ್ತೇವೆ: ಡಿಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಮತ್ತೆಮೋದಿ ಸರಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವುದು ಖಚಿತ ಎಂದು ಹೇಳಿದೆ .

ಇನ್ನು ಕರ್ನಾಟಕದಲ್ಲಿ ಟಾರ್ಗೆಟ್‌ 20 ಗುರಿ ಇರಿಸಿದ್ದ ಆಡಳಿತಾರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ. ದೇಶದ ಯಾವುದೇ ಎಕ್ಸಿಟ್‌ ಪೋಲ್‌ ಸಂಸ್ಥೆಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಡಬಲ್‌ ಡಿಜಿಟ್‌ ಸ್ಥಾನ ನೀಡಿಲ್ಲ. ಹೆಚ್ಚೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿದೆ. ಆದರೆ, ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಿಖರವಾದ ನಂಬರ್‌ ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಮಾತ್ರ ಯಾವುದೇ ಎಕ್ಸಿಟ್‌ ಪೋಲ್‌ ಬಗ್ಗೆಯೂ ನಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದಲ್ಲದೆ, ಡಬಲ್‌ ಡಿಜಿಟ್‌ಅನ್ನು ದಾಟಲಿದ್ದೇವೆ ಎಂದು ತಿಳಿಸಿದ್ದಾರೆ.

ಚುನಾವಣಾ ಸಮೀಕ್ಷೆಯ ಕುರಿತು ಮಾತನಾಡಿದ ಡಿಕೆ ಶಿವಕುಮಾರ್‌, ನಾನು ಮೊದಲೇ ಹೇಳೀದ್ದೇನೆ. ಯಾವುದೇ ಎಕ್ಸಿಟ್ ಪೋಲ್ ಬಗ್ಗೆ ನನಗೆ ನಂಬಿಕೆ ಇಲ್ಲ. ಕರ್ನಾಟಕದಲ್ಲಿ ಡಬಲ್ ಡಿಜಿಟ್ ದಾಟುತ್ತೇವೆ. ಕಣ್ಣಲ್ಲಿ ನೋಡಿದಿರಲ್ಲ, ಹಾಗಾದ್ರೆ ಎಷ್ಟಾಗುತ್ತದೆ ಅಂತ ಹೇಳಿ. ಈ ಎಕ್ಸಿಟ್ ಪೋಲ್ ಬಗ್ಗೆ ವಿಶ್ವಾಸ ಇಲ್ಲ. ಬಹಳ ಇಂಟೀರಿಯರ್, ಡೆಪ್ತ್ ಆಗಿ ಹೋಗೋದಿಲ್ಲ. ಸ್ಯಾಂಪಲ್ ಅಷ್ಟೇ ಕಲೆಕ್ಟ್ ಮಾಡಿರುತ್ತಾರೆ ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಎಕ್ಸಿಸ್‌ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 20 ರಿಂದ 22 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಇನ್ನು ಜೆಡಿಎ ಒಳಗೊಂಡ ಎನ್‌ಡಿಎ ಮೈತರಿ 23-25 ಸೀಟ್‌ಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ 3 ರಿಂದ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜು ಮಾಡಿದೆ.

ಇನ್ನು ಸಿಎನ್‌ಎನ್‌ ನ್ಯೂಸ್‌18 ಸಮೀಕ್ಷೆಯೂ ಕೂಡ ಕಾಂಗ್ರೆಸ್‌ಗೆ ಶಾಕಿಂಗ್‌ ಫಲಿತಾಂಶ ನೀಡಿದೆ. ಎನ್‌ಡಿಎ ಕರ್ನಾಟಕದಲ್ಲಿ 23-26 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದಿದ್ದರೆ, ಕಾಂಗ್ರೆಸ್‌ 3 ರಿಂದ 7 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜು ಮಾಡಿದೆ.

ಜನ್‌ ಕೀ ಬಾತ್‌ ಸಮೀಕ್ಷೆಯಲ್ಲಿ ಬಿಜೆಪಿ 19 ರಿಂದ 20 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿದ್ದರೆ, ಜೆಡಿಎಸ್‌ 2-3 ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿದೆ. ಕಾಂಗ್ರೆಸ್‌ 5-7 ಸ್ಥಾನಗಳಲ್ಲಿ ಜಯ ಸಾಧಿಸಬಹುದು ಎಂದು ಅಂದಾಜು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!