ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ(Lok sabha Election) ಕಾವು ಜೋರಾಗುತ್ತಿದ್ದು, ಈ ಮಧ್ಯೆ ಮಂಡ್ಯ(Mandya)ದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರನ್ನ ಕಣಕ್ಕೀಳಿಸುತ್ತದೆ ಎಂಬ ಕುತೂಹಲವಿದೆ.
ಈ ಕುರಿತು ದೆಹಲಿಯಿಂದ ಆಗಮಿಸಿದ ಹಾಲಿ ಸಂಸದೆ ಸುಮಲತಾ(Sumalatha) ಅವರು, ‘ಮಂಡ್ಯದ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ ಮಾಡಿದ್ದೀನಿ. ಅಭ್ಯರ್ಥಿ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.
ವಿಜಯೇಂದ್ರ ಅವರು ಸಹ ಮಾರ್ಚ್ 22 ರವರೆಗೂ ಟಿಕೆಟ್ ಫೈನಲ್ ಆಗಲ್ಲ ಅಂದಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು ಕೂತು ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಾರೆ. ನಾನು ರಾಜಕೀಯ ಮಾಡಿದ್ರೆ, ಮಂಡ್ಯದಿಂದಲೇ ಮಾಡುತ್ತೇನೆ ಎಂದು ಹೇಳಿದ್ದೆ, ಈಗಲೂ ಅದನ್ನೆ ಹೇಳ್ತಿದ್ದೀನಿ. ಬೇರೆಯವರು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ಎಂದು ಹೇಳುತ್ತಿದ್ದಾರೆ. ಪ್ರಧಾನಿಯವರೆ ಕರೆ ಮಾಡಿ ನನ್ನನ್ನ ಕರೆಸಿ ಮಾತನಾಡಿ ಎಂದು ಹೇಳಿದರು. ಹೀಗಾಗಿ ನನ್ನನ್ನ ಕರೆಸಿದ್ದಾಗಿ ನಡ್ಡಾ ಅವರು ಹೇಳಿದ್ದಾರೆ. ಪಕ್ಷದಲ್ಲಿ ನನ್ನ ಬಗ್ಗೆ ತುಂಬಾ ಗೌರವವಿದ್ದು, ಪಕ್ಷದಲ್ಲಿಇರಬೇಕು ಎಂದು ಹೇಳಿದ್ದಾರೆ. ಪಾಸಿಟಿವ್ ಆಗಿ ರಿಸಲ್ಟ್ ಬರುತ್ತೆ ಎನ್ನುವ ವಿಶ್ವಾಸವಿದೆ. ವರಿಷ್ಠರು ಯಾವ ತೀರ್ಮಾನ ಮಾಡ್ತಾರೆ ಕಾದು ನೋಡೋಣ ಎಂದರು.