ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಯೆಮೆನ್‌ನಲ್ಲಿ ಬುಧವಾರ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಬೇಕಾಗಿತ್ತು. ಆದರೆ ಪ್ರಭಾವಿ ಸುನ್ನಿ ಮುಸ್ಲಿಂ ಧರ್ಮಗುರು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯ ಪ್ರವೇಶದ ನಂತರ ಶಿಕ್ಷೆ ಮುಂದೂಡಲಾಗಿದೆ.
ಇತ್ತ ಯೆಮೆನ್‌ನಲ್ಲಿರುವ ಮೃತ ವ್ಯಕ್ತಿ ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಮಾತ್ರ ಬ್ಲಡ್ ಮನಿ, ಕಿಸಾಸ್ ಪ್ರಕಾರವೇ ದೇವರ ಕಾನೂನನ್ನು ಕಟ್ಟುನಿಟ್ಟಾಗಿ ಅನ್ವಯಿಸಬೇಕು ಎಂದು ಮೃತನ ಕುಟುಂಬ ಪಟ್ಟು ಹಿಡಿದಿದೆ.
ಈ ಹಿಂದೆ, ನಿಮಿಷಾ ಪ್ರಿಯಾ ಅವರ ವಕೀಲ ಸುಭಾಷ್ ಚಂದ್ರನ್ ಕೆ ಆರ್ ಅವರು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಅವರ ಮೂಲಕ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರು ಮತ್ತು ಕೆಲವು ಸ್ಥಳೀಯ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದರು. ಅವರ ಕುಟುಂಬವು ಬ್ಲಡ್ ಮನಿ ಸ್ವೀಕರಿಸುವಂತೆ ಮಾಡಲು ಮತ್ತು ಕೇರಳ ನರ್ಸ್ ಮರಣದಂಡನೆಯಿಂದ ಪಾರಾಗಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆಎಂದು ತಿಳಿಸಿದ್ದರು.
ಆದ್ರೆ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬವು ಬ್ಲಡ್ ಮನಿ ಸ್ವೀಕರಿಸಲು ನಿರಾಕರಿಸಿದೆ. ಆರೋಪಿಗೆ ಕ್ಷಮೆ ಇಲ್ಲ. ಗಲ್ಲು ಶಿಕ್ಷೆ ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದಿದೆ ಎಂಬ ಮಾಹಿತಿ ಬಂದಿದೆ.