ಸಮಾವೇಶದಲ್ಲಿ ಐಸಿಸಿ ಬೆಂಬಲಿತ ವ್ಯಕ್ತಿ ಭಾಗವಹಿಸಿಲ್ಲ: ಮುಸ್ಲಿಂ ಧರ್ಮಗುರು ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ಡೆಸ್ಕ್:‌

ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸಿ(ಐಎಸ್‌ಐಎಸ್) ಬೆಂಬಲಿತ ವ್ಯಕ್ತಿ ಸಮಾರಂಭದಲ್ಲಿ ಭಾಗವಹಿಸಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹಜರತ್ ಸೈಯ್ಯದ ಮೊಹಮ್ಮದ ಬಾದಶಾ ಪೀರಾ(ಭಾಷಾಪೀರಾ) ದರ್ಗಾ ಧರ್ಮಗುರು ಸಯ್ಯದ ತಾಜುದ್ದೀನ್ ಖಾದ್ರಿ ಸ್ಪಷ್ಟಪಡಿಸಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಮಾವೇಶಕ್ಕೆ ೧೫೦ ಕ್ಕೂ ಹೆಚ್ಚು ಸೂಪಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ೧೦೦ ಧರ್ಮಗುರುಗಳ ಭಾಗವಹಿಸಿದ್ದರು. ಯಾರು ಸಹ ಐಸಿಸಿ ಬೆಂಬಲಿತ ವ್ಯಕ್ತಿಗಳಿಲ್ಲ ಎಂದರು.

ಪೊಲೀಸ್ ಇಲಾಖೆಯ ಸೂಚನೆಯಂತೆ ವೇದಿಕೆ ಮೇಲೆ ಕೇವಲ ೨೫ ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಬಗ್ಗೆ ಸಹ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿದರು.
ಸಮಾರಂಭದಲ್ಲಿ ಅಂತಹ ವ್ಯಕ್ತಿ ಭಾಗವಹಿಸಿದ್ದರೆ ಗುಪ್ತಚರ ಇಲಾಖೆಗೆ ಅದರ ಬಗ್ಗೆ ಗೊತ್ತಿರಬೇಕಿತ್ತು. ಐಸಿಸಿ ಬೆಂಬಲಿತ ವ್ಯಕ್ತಿ ಯಾರೆಂಬುವುದು ಬಸವನಗೌಡ ಪಾಟೀಲ ಯತ್ನಾಳ ಅವರೇ ಹೇಳಬೇಕು. ಈ ಬಗ್ಗೆ ನಾವು ತನಿಖೆಗೆ ಸಿದ್ಧರಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಸಲು ನಾವು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!