ಹೊಸದಿಗಂತ ಡಿಜಿಟಲ್ ಡೆಸ್ಕ್
ಯಾರ ಮೇಲೂ ಇಂತಹದ್ದೇ ಭಾಷೆ ಕಲಿಯಬೇಕು ಅಂತ ಒತ್ತಡ ಹೇರಲು ಸಾಧ್ಯವಿಲ್ಲ. ಹಾಗಾಗಿ ಯಾರ ಮೇಲೂ ಹಿಂದಿ ಭಾಷೆ ಒತ್ತಡ ಹೇರಿಲ್ಲ ಎಂದು ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದಿ ರಾಷ್ಟ್ರೀಯ ಭಾಷೆ ಅಂತ ಯಾರು ಹೇಳಿಲ್ಲ.ಹಿಂದಿ ಹೇರಿಕೆ ಕೂಡಾ ನಾವು ಮಾಡುವುದಿಲ್ಲ. ಮಾತೃಭಾಷೆಗೆ ಆದ್ಯತೆ ನೀಡುತ್ತೇವೆ. ವಿದ್ಯಾರ್ಥಿಗಳು ಇಚ್ಚೆ ಪಡೋ ಭಾಷೆಯಲ್ಲಿ ಕಲಿಯಬಹುದು.ಹಾಗೆ ಮಾಡಿದರೆ ಕೌಶಲ್ಯ ಮತ್ತು ಪ್ರತಿಭೆ ಹೊರ ಬರುತ್ತದೆ ಎಂದರು.