ಕೀವ್‌ ನಲ್ಲಿದ್ದ ಎಲ್ಲಾ ಭಾರತೀಯರು ತಾಯ್ನಾಡಿಗೆ ವಾಪಾಸ್: ಕಳೆದ 24 ಗಂಟೆಗಳಲ್ಲಿ 6 ವಿಮಾನಗಳು ಟೇಕ್‌ ಆಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುದ್ಧಪೀಡಿತ ಪ್ರದೇಶ ಉಕ್ರೇನ್ ನಲ್ಲಿಉ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭಾರತದ 9ನೇ ವಿಮಾನ 218 ಜನರನ್ನು ಹೊತ್ತು ಬುಕಾರೆಸ್ಟ್ ನಿಂದ ದೆಹಲಿಗೆ ಬಂದಿಳಿದಿದೆ.
ಕಳೆದ 24 ಗಂಟೆಗಳ್ಲಿ 1,377 ನಾಗರೀಕರನ್ನು ಭಾರತ ಸೋಳಾಂತರಿಸಿದ್ದುಮ ಪೊಲ್ಯಾಂಡ್ ನಿಂದ ಮೊದಲ ವಿಮಾನ ಸೇರಿ ಒಟ್ಟು 6 ವಿಮಾನಗಳು ಭಾರತೀಯರನ್ನು ಹೊತ್ತು ಪ್ರಯಾಣ ನಡೆಸುತ್ತಿವೆ. ʼ
ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಮುಂದಿನ ಮೂರು ದಿನಗಳಲ್ಲಿ 26ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಉಕ್ರೇನ್ ವಾಯುಪ್ರದೇಶ ಮುಚ್ಚಿರುವುದರಿಂದ ರೊಮೇನಿಯಾ, ಹಂಗೇರಿ, ಪೊಲ್ಯಾಂಡ್, ಸ್ಲೋವ್ಯಾಕ್ ರಿಪಬ್ಲಿಂಗ್ ಮೂಲಕ ಭಾರತೀಯರನ್ನು ತಾಯ್ನಾಡಿಗೆ ವಾಪಾಸ್ ಕರೆತರಲಾಗುತ್ತಿದೆ.
ಈ ಮೂಲಕ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಯಾವುದೇ ಭಾರತೀಯ ಉಳಿದಿಲ್ಲ. ಎಲ್ಲರನ್ನು ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿದ್ದ ಸುಮಾರು 20 ಸಾವಿರ ಭಾರತೀಯರಲ್ಲಿ ಈಗಾಗಲೇ 12 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದಾರೆ. ಅಂದರೆ ಇದು ಒಟ್ಟು ಸಂಖ್ಯೆಯ ಶೇ.60ರಷ್ಟು. ಉಳಿದ ಶೇ.40ರಷ್ಟು ಮಂದಿ ಖಾರ್ಕೀವ್, ಸುಮಿಗಳಲ್ಲಿ ಇದ್ದಾರೆ.
ಈಗಾಗಲೇ ನಿಯೋಜನೆಗೊಂಡಿರುವ 46 ವಿಮಾನಗಳ ಪೈಕಿ 29 ರೊಮೇನಿಯಾದ ಬುಚರೆಸ್ಟ್, 10 ಹಂಗೇರಿಯ ಬುಡಪೆಸ್ಟ್, 6 ಪೊಲ್ಯಾಂಡ್ ಹಾಗೂ 1 ಸ್ಲೋವೇಕಿಯಾದಿಂದ ಹಾರಾಟ ನಡೆಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!