ಸರ್ಕಾರ ಯಾವುದೇ ಕಾಯ್ದೆ ರದ್ದು ಮಾಡಲಿ, ಮುಸ್ಲಿಮರು ಷರಿಯತ್ ಪಾಲಿಸುತ್ತಾರೆ: ಸಂಸದ ಎಸ್‌ಟಿ ಹಸನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ಮುಸ್ಲಿಮ್ ಮದುವೆ ಕಾಯ್ದೆ , ವಿಚ್ಚೇದನ ಕಾಯ್ದೆಗಳನ್ನು ರದ್ದುಗೊಳಿಸಲಾಗಿದ್ದು, ಇದು ಕೋಲಾಹಲಕ್ಕೆ ಕಾರಣವಾಗಿದೆ.

ಅಸ್ಸಾಂ ಸರ್ಕಾರದ ಈನಿರ್ಧಾರವನ್ನು ಮುಸ್ಲಿಮ್ ಮುಖಂಡರು ಟೀಕಿಸಿದ್ದು, ಮುಸ್ಲಿಮರು ಷರಿಯತ್ ಕಾನೂನು ಮಾತ್ರ ಪಾಲಿಸುತ್ತಾರೆ. ಖುರಾನ್ ಅನುಸರಿಸುತ್ತಾರೆ ಎಂದು ಸಮಾಜವಾದಿ ಪಾರ್ಟಿ ನಾಯಕ ಎಸ್‌ಟಿ ಹಸನ್ ಹೇಳಿದ್ದಾರೆ.

ಇದರ ಜೊತೆಗೆ ಆಲ್ ಇಂಡಿಯಾ ಯೂನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಮುಖ್ಯಸ್ಥ, ಮೌಲನಾ ಬದ್ರುದ್ದಿನ್ ಅಜ್ಮಲ್ ಕೂಡ ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಸಚಿವ ಸಂಪುಟವು ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935 ಅನ್ನು ರದ್ದುಗೊಳಿಸಿದೆ.

ಈ ನಿರ್ಧಾರ ಹೊರಬೀಳುತ್ತಿದ್ದಂತೆ ಆಕ್ರೋಶಗಳು ಹೆಚ್ಚಾಗಿದೆ. ಸರ್ಕಾರ ಯಾವುದೇ ಕಾಯ್ದೆ ರದ್ದು ಮಾಡಬಹುದು, ಹೊಸ ಕಾಯ್ದೆ ಜಾರಿಗೆ ತರಬಹುದು. ಕಾನೂನು ಬದಲಿಸಬಹುದು. ಆದರೆ ಮುಸ್ಲಿಮರು ಷರಿಯತ್ ಹಾಗೂ ಖುರಾನ್ ಮಾತ್ರ ಪಾಲಿಸುತ್ತಾರೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಸಂಸದ ಎಸ್‌ಟಿ ಹಸನ್ ಹೇಳಿದ್ದಾರೆ.

ಪ್ರತಿ ಧರ್ಮ ಅವರದ್ದೆ ಕಾನೂನು ಪಾಲಿಸುತ್ತದೆ. ಮುಸ್ಲಿಮರು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಿಂದ ಷರಿಯಾ ಕಾನೂನು , ಖುರಾನ್ ಪಾಲಿಸಿಕೊಂಡು ಬರುತ್ತಿದ್ದಾರೆ. ಇದೀಗ ಕಾಯ್ದೆ ಬದಲಾದರೆ ನಂಬಿಕೆ, ಪದ್ಧತಿಗಳು ಬದಲಾಗುವುದಿಲ್ಲ. ಇದು ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ ಎಂದು ಹಸನ್ ಹೇಳಿದ್ದಾರೆ. ಇತ್ತ ಮೌಲನ ಬದ್ರುದ್ದಿನ್ ಅಜ್ಮಲ್, ಮುಸ್ಲಿಮ್ ವಿವಾಹ ಕಾಯ್ದೆ ರದ್ದು ಮಾಡುವ ಮೂಲಕ ಚುನಾವಣೆ ರಾಜಕೀಯ ಮಾಡುತ್ತಿದ್ದಾರೆ. ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರು ತಾಳ್ಮೆ ಪರೀಕ್ಷಿಸಬೇಡಿ ಎಂದು ಮೌಲನಾ ಬದ್ರುದ್ದಿನ್ ಅಜ್ಮಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!