ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಎಲ್ಲೆಡೆ ಯುಗಾದಿ ಸಂಭ್ರಮ ಮನೆಮಾಡಿದೆ, ಹೂವು, ಹಣ್ಣುಗಳ ದುಬಾರಿ ಬೆಲೆಗೆ ಜನ ಹೈರಾಣಾಗಿದ್ದಾರೆ.
ಹೂವು, ಹಣ್ಣುಗಳಿಲ್ಲದೆ ಹಬ್ಬಗಳ ಆಚರಣೆ ಕಷ್ಟಸಾಧ್ಯ, ಕೆಲವರು ಹಬ್ಬಕ್ಕೆ ಇನ್ನೂ ಸಮಯವಿದೆ ಎನ್ನುವಾಗಲೇ ಹಣ್ಣುಗಳನ್ನು ತಂದು ಫ್ರಿಡ್ಜ್‌ನಲ್ಲಿ ಸ್ಟಾಕ್ ಇಟ್ಟಿದ್ದಾರೆ.
ಹೂವು ಹಣ್ಣು ತರಕಾರಿ ಖರೀದಿಗೆ ಬೆಳಗ್ಗೆಯೇ ಜನ ಬೆಂಗಳೂರಿನ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದ್ದು, ಬೆಲೆ ಕೇಳಿ ಶಾಕ್ ಆಗಿದ್ದಾರೆ. ಎಂದಿನ ದಿನಕ್ಕಿಂತ ಇಂದು ಬೆಲೆ ದುಪ್ಪಟ್ಟಿಗಿಂತಲೂ ಹೆಚ್ಚಿದೆ.
ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿದ್ದು, ಫುಲ್ ಟ್ರಾಫಿಕ್ ಜಾಮ್ ಆಗಿದೆ. ಮಾರು ಮಲ್ಲಿಗೆ, ಸೇವಂತಿಗೆ ಬೆಲೆ 150 ರೂಪಾಯಿಗೆ ಕಡಿಮೆಯಿಲ್ಲ. ಇನ್ನು ಹಣ್ಣುಗಳ ಬೆಲೆಯೂ ಎಂದಿಗಿಂತ ಹೆಚ್ಚಾಗಿದ್ದು, ಎರಡು ಕೆ.ಜಿ. ಬದಲು ಒಂದು ಕೆ.ಜಿ ಹಣ್ಣನ್ನು ಕೊಂಡು ಜನ ಮನೆ ಕಡೆ ನಡೆದಿದ್ದಾರೆ.