HEALTH | ಏನೇ ಮಾಡಿದ್ರೂ ಬಿಪಿ ಕಂಟ್ರೋಲ್‌ಗೆ ಬರ್ತಿಲ್ವಾ? ಮೊದಲು ಈ ಚೇಂಜಸ್‌ ಮಾಡ್ಕೊಳಿ

ಬಿಪಿ ಸಮಸ್ಯೆ ಆಗ್ತಿದ್ಯಾ? ಮನೆಯಲ್ಲಿಯೇ ತಪ್ಪದೇ ಈ ಕೆಲಸವನ್ನು ಮಾಡಿನೋಡಿ..

ನಿಯಮಿತವಾಗಿ ವಾಕಿಂಗ್​ ಹಾಗೂ ವ್ಯಾಯಾಮ ಮಾಡಿ. ವಾರಕ್ಕೆ ಕನಿಷ್ಠ 150 ನಿಮಿಷಗಳ ವಾಕಿಂಗ್​ ಹಾಗೂ 75 ನಿಮಿಷಗಳ ವ್ಯಾಯಾಮ ಮಾಡಬೇಕು.

ಪೊಟ್ಯಾಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ತಾಜಾ ತರಕಾರಿ, ಹಣ್ಣುಗಳು, ಸೊಪ್ಪುಗಳು, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸಬೇಕು.

ನೈಸರ್ಗಿಕವಾಗಿ ದೊರೆಯುವ ಪೂರಕ ಆಹಾರಗಳನ್ನು ತೆಗೆದುಕೊಳ್ಳಬೇಕು. ನೀವು ಮೀನಿನ ಎಣ್ಣೆ, ದಾಸವಾಳದ ಚಹಾ, ಹಾಲೊಡಕು ಪ್ರೋಟೀನ್ ಮತ್ತು ಬೆಳ್ಳುಳ್ಳಿಯಂತಹವುಗಳನ್ನು ತಿನ್ನಬೇಕು.

ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ತರಕಾರಿಗಳು, ಡೈರಿ ಉತ್ಪನ್ನಗಳು, ಕೋಳಿ ಮಾಂಸ ಮತ್ತು ಧಾನ್ಯಗಳನ್ನು ಸೇವಿಸಿ.

ನೀವು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರ ಸೇವಿಸಬೇಕು.

ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ, ಏಕೆಂದರೆ ಇದರಲ್ಲಿ ಸೋಡಿಯಂ ಅಧಿಕವಾಗಿರುತ್ತದೆ.

ಮದ್ಯವನ್ನು ಮಿತವಾಗಿ ಸೇವಿಸಬೇಕು.

ಕೆಫೀನ್ ಸೇವನೆಯನ್ನು ಕಡಿಮೆ ಮಾಡಬೇಕು.

ಹೆಚ್ಚು ಡಾರ್ಕ್ ಚಾಕೊಲೇಟ್ ಮತ್ತು ಕೋಕೋ ಸೇವಿಸಿ.

ನಿಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ಧೂಮಪಾನ ಮಾಡುವ ಅಭ್ಯಾಸವನ್ನು ತಕ್ಷಣ ನಿಲ್ಲಿಸಬೇಕು.

ಕೃತಕ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಬೇಕು.

ಪಾಲಿಫಿನಾಲ್‌ಗಳು ಅಧಿಕವಾಗಿರುವ ಹಣ್ಣುಗಳನ್ನು ಸೇವಿಸಬೇಕು.

ಧ್ಯಾನ ಹಾಗೂ ಪ್ರಾಣಾಯಾಮದಂತಹ ದೈಹಿಕ ಚಟುವಟಿಕೆಗೆ ಪ್ರಯತ್ನಿಸಬೇಕು.

ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಆರಾಮವಾಗಿ ಮಲಗಬೇಕಾಗುತ್ತದೆ.

ಒತ್ತಡ ನಿಯಂತ್ರಣದಲ್ಲಿ ಇಡಬೇಕು. ಇದಕ್ಕಾಗಿ ನೀವು ಸಂಗೀತ ಕೇಳಬೇಕು ಹಾಗೂ ಶಾಂತವಾಗಿರಲು ಪ್ರಯತ್ನಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!