ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ನಲ್ಲಿ ಅಷ್ಟೆಲ್ಲಾ ದೊಡ್ಡ ದುರಂತವಾದರೂ, ಅಮಾಯಕ ಜನಗಳ ಬಲಿ ಪಡೆದರು ಪಾಪಿ ಪಾಕಿಸ್ತಾನಕ್ಕೆ ಕಿಂಚಿತ್ತೂ ಪಾಪ ಪ್ರಜ್ಞೆ ಕಾಡ್ತಿಲ್ಲ. ಭಾರತ ಸರ್ಕಾರ ಅಷ್ಟೆಲ್ಲಾ ಕಠಿಣ ನಿರ್ಬಂಧಗಳನ್ನು ವಿಧಿಸಿದರು ಪಾಕ್ ಗೆ ಮಾತ್ರ ಇನ್ನು ಬುದ್ದಿ ಬಂದಿಲ್ಲ ಅನ್ನೋದೇ ದುರದೃಷ್ಟಕರ. ಮತ್ತೊಮ್ಮೆ ಪಾಕಿಸ್ತಾನ ತನ್ನ ನಾಲಿಗೆಯನ್ನು ಹರಿಬಿಟ್ಟಿದೆ.
ಹೌದು, ನಮ್ಮ ದೇಶದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಇರಿಸಿಲ್ಲ. ಅವುಗಳೆಲ್ಲ ಭಾರತವನ್ನೇ ಗುರಿಯಾಗಿಸಿ ಇಡಲಾಗಿದೆ ಎಂದು ಭಾರತಕ್ಕೆ ಪಾಕ್ ಸಚಿವ ಹನೀಫ್ ಅಬ್ಬಾಸಿ ಬೆದರಿಕೆ ಹಾಕಿದ್ದಾನೆ.
ಪಾಕಿಸ್ತಾನದ ಶಸ್ತ್ರಾಗಾರದಲ್ಲಿ ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಭಾರತಕ್ಕಾಗಿ ಮಾತ್ರ ಇರಿಸಿದ್ದೇವೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ ನೀರು ಸರಬರಾಜನ್ನು ನಿಲ್ಲಿಸಲು ಧೈರ್ಯ ಮಾಡಿದರೆ ನೀವು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ನಾಲಿಗೆ ಹರಿಬಿಟ್ಟಿದ್ದಾನೆ.
ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ತೀವ್ರ ಅಡಚಣೆ ಉಂಟಾಗಿದೆ. ಇದು 10 ದಿನಗಳ ಕಾಲ ಹೀಗೆ ಮುಂದುವರೆದರೆ ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದು ಸವಾಲು ಹಾಕಿದ್ದಾನೆ.