ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಬಿಗ್ ಅನೌನ್ಸ್‌ಮೆಂಟ್ ನೀಡಿದ್ದು, ಜು.10ರಿಂದ ಒಂದು ತಿಂಗಳ ಕಾಲ ಪ್ರತೀ ದಿನ ಎರಡು ಗಂಟೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ತಿಳಿಸಲಾಗಿದೆ,
ಜುಲೈ 10ರಿಂದ ಆಗಸ್ಟ್ 09ರವರೆಗೆ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣವನ್ನು ಸಂಪರ್ಕಿಸುವ ಸಿಗ್ನಲಿಂಗ್ ಹಾಗೂ ಇತರೆ ಕಾಮಗಾರಿಗಳಿಗೆ ನಮ್ಮ ಮೆಟ್ರೋ ಮುಂದಾಗಿದ್ದು, ಪ್ರತಿದಿನ ಬೆಳಗ್ಗೆ 5ಗಂಟೆಯಿಂದ 7 ಗಂಟೆವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ.
ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ರಸ್ತೆ ಹಾಗೂ ಕೆ.ಆರ್.ಪುರ-ವೈಟ್‌ಫೀಲ್ಡ್ ನಡುವಿನ ಎರಡು ಮೆಟ್ರೋ ರೈಲು ಸಂಚಾರ ಎರಡು ಗಂಟೆ ಸ್ಥಗಿತಗೊಳ್ಳುತ್ತದೆ. ತದನಂತರ ಮಾಮೂಲಾಗಿ ರಾತ್ರಿ 11ರವರೆಗೂ ಮೆಟ್ರೋ ಸಂಚಾರ ಇರಲಿದೆ. ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ಹಿಂದೆ ಬೈಯಪ್ಪನಹಳ್ಳಿ ಕೆಂಗೇರಿ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿ ಪ್ರಯಾಣಿಕರು ಮೆಟ್ರೋ ಸೇವೆ ಇಲ್ಲದೆ ಪರದಾಡುವಂತಾಗಿತ್ತು, ಸಿಗ್ನಲಿಂಗ್ ಸಮಸ್ಯೆಯಿಂದ ಮೆಟ್ರೋ ಸಂಚಾರ ಆರಂಭವಾಗಿಲ್ಲ. ಹಾಗಾಗಿ ಮೆಟ್ರೋ ನಿಲ್ದಾಣದಲ್ಲಿ ಜನಜಂಗುಳಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗಿದ್ದವರು. ಹಾಗಾಗಿ ಸಿಗ್ನಲ್ ಸಮಸ್ಯೆ ಪರಿಶೀಲನೆಗಾಗಿ ಇದೀಗ ಮೆಟ್ರೋ ಸಂಚಾರ ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ.