ಇನ್ಮುಂದೆ ಚಿಲ್ಲರೆಗಾಗಿ ಪ್ರಯಾಣಿಕರು-ಕಂಡಕ್ಟರ್​​​ಗಳ ನಡುವೆ ನೋ ಫೈಟಿಂಗ್, KSRTC ಈಗ ಕ್ಯಾಶ್​ಲೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿಕೆಟ್‌ ಗೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಸದಾ ವಾಗ್ವಾದ ನಡೆಯುತ್ತಲೇ ಇರುತ್ತದೆ. ಕೆಎಸ್‌ಆರ್‌ಟಿಸಿ ಇಂತಹ ತೊಂದರೆಗಳನ್ನು ಹೋಗಲಾಡಿಸಲು ಪ್ರತಿಪಾದಿಸಿದೆ.

Google Pay, Phone Pay ಮತ್ತು Paytm ಮೂಲಕ ಪಾವತಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಡುವ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು KSRTC ಯೋಜಿಸುತ್ತಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ.

KSRTC ಖಾಸಗಿ ಕಂಪನಿಯಿಂದ 10245 ಸಾವಿರ ETM ಟಿಕೆಟ್ ಯಂತ್ರಗಳನ್ನು ತಿಂಗಳಿಗೆ 645 ರೂ ಬಾಡಿಗೆ ದರದಲ್ಲಿ ಖರೀದಿಸಲು ಮುಂದಾಗಿದೆ. ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಗೂಗಲ್ ಪೇ, ಫೋನ್ ಪೇ. Paytm ಮೂಲಕ ಪಾವತಿಸುವ ಮೂಲಕ ನೀವು ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ಪ್ರಯಾಣಿಸಬಹುದು. ಈ ಹೊಸ ಯಂತ್ರಗಳನ್ನು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಲು ಬಳಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!