ಮದುವೆ ಮನೆಗಳಲ್ಲಿ ಇನ್ನುಮುಂದೆ ನೋ ಪ್ಲಾಸ್ಟಿಕ್ ಬಾಟಲ್, ಏನಿದು ಹೊಸ ರೂಲ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಮನೆಗಳಲ್ಲಿ ಇನ್ನುಮುಂದೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್​ ಆದೇಶ ಹೊರಡಿಸಿದೆ.

ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್, ಪ್ಲಾಸ್ಟಿಕ್ ಬಾಟಲಿಗಳು ಹಾನಿಯನ್ನುಂಟುಮಾಡುತ್ತಿವೆ,​ ಮದುವೆ ಸಮಾರಂಭದಲ್ಲಿ, ಯಾವುದೇ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ತಿಳಿಸಿದೆ.

ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ಕಠಿಣ ಕ್ರಮಗಳು ಅಗತ್ಯವೆಂದು ನ್ಯಾಯಾಲಯ ಹೇಳಿದೆ. 100 ಕ್ಕೂ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಸಲು ಪರವಾನಗಿ ಅಗತ್ಯ ಇದೆ ಎಂದು ಕೋರ್ಟ್ ಆದೇಶಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!