ಇನ್ಮುಂದೆ ರಸ್ತೆ ಬದಿ ಮೇಕಪ್‌ ಮಾರಾಟ ಮಾಡುವಂತಿಲ್ಲ! ಶೀಘ್ರದಲ್ಲೇ ಹೊಸ ಕಾಸ್ಮೆಟಿಕ್ಸ್ ಆಕ್ಟ್ ಜಾರಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡೋರವರೆಗೂ ಎಲ್ಲಾರೂ ಮೇಕಪ್‌ ಮಾಡುವವರೇ. ಎಲ್ಲರಿಗೂ ತಮ್ಮ ಅಂದ ಇನ್ನು ಚನ್ನಾಗಿ ಕಾಣಬೇಕು ಅನ್ನೋದೇ ಇಷ್ಟ. ಆದ್ರೆ ಈಗ ಅದೇ ಕಷ್ಟ ಆಗಿದೆ.

ಹೌದು! ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಕಾಜಲ್, ಲಿಪ್ಸ್ಟಿಕ್, ಪೌಡರ್ ಮತ್ತು ಇತರೆ ಸೌಂದರ್ಯ ವರ್ಧಕಗಳ ಮೇಲೆ ಇನ್ಮುಂದೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಅನೇಕ ಕಡೆ ರಸ್ತೆ ಬದಿಯಲ್ಲಿ ಕಳಪೆ ಗುಣಮಟ್ಟದ ಸೌಂದರ್ಯ ವರ್ಧಕಗಳ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೊಸ ಆಕ್ಟ್ ಜಾರಿಗೆ ಬರಲಿದೆ.

ಈ ಹೊಸ ಕಾಸ್ಮೆಟಿಕ್ಸ್ ಆಕ್ಟ್ ಜಾರಿಗೆ ತರಲು ಕೇಂದ್ರ ಆರೋಗ್ಯ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆಯಲು ಮುಂದಾಗಿದ್ದಾರೆ. ಈ ಆಕ್ಟ್ ನಲ್ಲಿ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದ್ದು, ಕಳಪೆ ಗುಣಮಟ್ಟದ ಸೌಂದರ್ಯ ವರ್ಧಕಗಳ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!