ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಕ್ರಿಕೆಟ್ ವಿಶ್ಲೇಷಣೆ ನೀಡುತ್ತಿದ್ದ ರವಿಚಂದ್ರನ್ ಅಶ್ವಿನ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದು, ಇದೀಗ ಅಶ್ವಿನ್ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇನ್ನು ಮುಂದೆ ಐಪಿಎಲ್ 2025 ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕುರಿತು ಯಾವುದೇ ಚರ್ಚೆ ನಡೆಸದಿರಲು ನಿರ್ಧರಿಸಿದ್ದಾರೆ.
ಹೌದು! ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ನಂತರ ವಿವಾದ ಉಂಟಾಯಿತು. ಚಾನೆಲ್‌ನಲ್ಲಿ ಬಂದ ಅತಿಥಿಯೊಬ್ಬರು, ನೂರ್ ಅಹ್ಮದ್ ಸಿಎಸ್‌ಕೆ ಆಡುವ ಹನ್ನೊಂದರಲ್ಲಿ ಸ್ಥಾನಕ್ಕೆ ಅರ್ಹರಲ್ಲ. ತಂಡದಲ್ಲಿ ಇಬ್ಬರು ಹಿರಿಯ ಸ್ಪಿನ್ನರ್‌ಗಳಿದ್ದಾರೆ. ನೂರ್ ಬದಲಿಗೆ ಹೆಚ್ಚುವರಿ ಬ್ಯಾಟ್ಸ್‌ಮನ್ ಆಡಬೇಕು, ಎಂದು ಹೇಳಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಸಿಎಸ್‌ಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರು ಈ ಕಾಮೆಂಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಅಶ್ವಿನ್ ಮತ್ತು ಅವರ ಚಾನೆಲ್‌ನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದ್ದರು.