ಇನ್ಮುಂದೆ ಟ್ರಾಫಿಕ್‌ನಲ್ಲಿ ಅನಗತ್ಯ ಕಾಯಬೇಕಿಲ್ಲ! ಬೆಂಗಳೂರಿನಲ್ಲಿ AI ಸಿಗ್ನಲ್‌ಗಳ ಅಳವಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸುಗಮ ಸಂಚಾರ ಹಾಗೂ ವಾಹನ ಸವಾರರ ಪ್ರಯಾಣದ ಸಮಯದಲ್ಲಿನ ವಿಳಂಬವನ್ನು ಕಡಿಮೆಗೊಳಿಸುವ ಉದ್ದೇಶದಿಂದ ನಗರದ 123 ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಾಧರಿತ ಸಿಗ್ನಲ್ ಕಂಟ್ರೋಲ್ ಸಿಸ್ಟಂ ಅಳವಡಿಕೆಯನ್ನು ಪೂರ್ಣಗೊಳಿಸಲಾಗಿದೆ.

ಈ ಹಿಂದೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದ ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಯೋಜನೆಯ ಮುಂದುವರೆದ ಭಾಗವಾಗಿ ನಗರದ 165 ಜಂಕ್ಷನ್‌ಗಳ ಪೈಕಿ 123 ಕಡೆಗಳಲ್ಲಿ ನೂತನ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಸುಗಮ ಸಂಚಾರ ಮಾತ್ರವಲ್ಲದೆ ಪ್ರಯಾಣದ ಸಮಯವೂ ಸಹ ಕಡಿಮೆಯಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here