ನೋ ಮಸ್ಕಿಟೋ ! ಆಂಧ್ರದಲ್ಲಿ ಸೊಳ್ಳೆಗಳ ಮೇಳೆ ನಿಗಾ ಇಡಲು AI ಬಳಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇನ್ಮುಂದೆ ಆಂಧ್ರದಲ್ಲಿ ಸೊಳ್ಳೆಗಳು ಕಾಣಿಸೋದು ಅನುಮಾನವೇ ಹೌದು, ಯಾಕೆ ಅಂತೀರಾ? ಈ ಸುದ್ದಿ ಓದಿ

ನಾನಾ ರೋಗ ರುಜಿನಗಳಿಗೆ ಕಾರಣವಾಗುವ ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು AI ಬಳಸಲು ಆಂಧ್ರಪ್ರದೇಶ ಮುಂದಾಗಿದೆ.

ಈ ಬಗ್ಗೆ ಟಿಡಿಪಿ ಪ್ರಕಟಣೆ ಹೊರಡಿಸಿದ್ದು, ಸೊಳ್ಳೆಗಳ ಪ್ರಭೇದ, ಲಿಂಗ ಮತ್ತು ಸಾಂದ್ರತೆಯನ್ನು ಪತ್ತೆಹಚ್ಚಲು ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಎಐ ಚಾಲಿತ ಸೆನ್ಸಾರ್ ಮತ್ತು ಡೋನ್‌ಗಳನ್ನು ನಿಯೋಜಿಸಲಿದೆ. ಇವುಗಳನ್ನು 6 ಮಹಾ ನಗರ ಪಾಲಿಕೆಗಳ 66 ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಲಾಗಿದೆ.

ತಾಪಮಾನದಂತಹ ಹವಾಮಾನ ಪರಿಸ್ಥಿತಿಗಳ ನೈಜ ಸಮಯದ ಮೇಲ್ವಿಚಾರಣೆಯನ್ನು ನಡೆಸಲಾಗುವುದು. ಇದರಿಂದ ರಾಸಾಯನಿಕವನ್ನು ಸುಮ್ಮನೆ ಎಲ್ಲೆಡೆ ಸಿಂಪಡಿಸುವುದು ತಪ್ಪುತ್ತದೆ. ಅಂತೆಯೇ ರಾಸಾಯನಿಕ ಸಿಂಪಡಿಸಲು ಡ್ರೋನ್  ಬಳಸುವುದರಿಂದ ಸಮಯ, ರಾಸಾಯನಿಕ ಪ್ರಮಾಣ, ವೆಚ್ಚಗಳು ಇಳಿಕೆಯಾಗುತ್ತವೆ ಅನ್ನೋ ಲೆಕ್ಕಾಚಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!