ಆಪರೇಷನ್ ಹಸ್ತದ ಅವಶ್ಯಕತೆಯೇ ಇಲ್ಲ, ಪಕ್ಷಕ್ಕೆ ಬರುವವರನ್ನು ತಡೆಯುವುದಿಲ್ಲ: ಡಿ.ಕೆ.ಶಿವಕುಮಾರ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪೂರ್ಣ ಮೆಜಾರಿಟಿ ಇದೆ, ನಮಗೆ ಆಪರೇಷನ್ ಹಸ್ತದ ಅವಶ್ಯಕತೆಯಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಮರಾಜನಗರದಲ್ಲಿ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ನಮಗಿಲ್ಲ. ಆದರೆ, ಪಕ್ಷ ಇಚ್ಚಿಸಿ ಬರುವವರನ್ನು ತಡೆಯಲಾಗುವುದಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟವರಿಗೆ ನಾವು ಕೂಡ ವಿಶ್ವಾಸ ತೋರಿಸಬೇಕಾಗಲಿದೆ ಎಂದರು.

ಪ್ರಧಾನಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಬಿಜೆಪಿ ನಾಯಕ ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಗವರ್ನರ್ ಬರುವುದು ಬೇಡ, ಸಿಎಂ ಬರುವುದು ಬೇಡ, ಡಿಸಿಎಂ ಬರುವುದು ಬೇಡ ಅಂದಿದ್ದಾರೆ. ಹಾಗಾಗಿ ಯಾರು ಹೋಗಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!