ಕಾಂಗ್ರೆಸ್‌ನಿಂದ ರಾಷ್ಟ್ರಭಕ್ತಿ ಕಲಿಯುವ ಅವಶ್ಯಕತೆ ಇಲ್ಲ: ಶಾಸಕ ರಾಜಕುಮಾರ್ ಪಾಟೀಲ್

ದಿಗಂತ ವರದಿ ಕಲಬುರಗಿ:

ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ಹಾಗೂ ರಾಷ್ಟ್ರಪ್ರೇಮದ ಭಕ್ತಿಯನ್ನು ಕಲಿಯುವ ಅವಶ್ಯಕತೆ ಬಿಜೆಪಿ ಪಕ್ಷಕ್ಕೆವಿಲ್ಲವೆಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಹೇಳಿದ್ದಾರೆ. ಅವರು ಜಿಲ್ಲೆಯ ಸೇಡಂ ಪಟ್ಟಣದ ಕೊತ್ತಲ ಬಸವೇಶ್ವರ ಸಭಾ ಮಂಟಪದಲ್ಲಿ ಆಯೋಜಿಸಿದ್ದ 750 ಮನೆಗಳ ನಿಮಾ೯ಣದ ಶಿಲಾನ್ಯಾಸದ ವೇದಿಕೆ ಕಾಯ೯ಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರಧ್ವಜವನ್ನು ಮಧ್ಯದಲ್ಲಿ ತಂದು ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಧರ್ಮ ,ಜಾತಿಗಳ ಮಧ್ಯೆ ವಿಷವನ್ನು ಬಿತ್ತುವ ಕಾಯ೯ಕ್ಕೆ ಕೈ ಹಾಕುತ್ತಿದ್ದು,ಮುಂಬರುವ ದಿನಗಳಲ್ಲಿ ಇದರ ಪರಿಣಾಮವನ್ನು ಬರುವಂತಹ ಚುನಿವಣೆಗಳಲ್ಲಿ ಎದುರಿಸಬೇಕಾಗುತ್ತದೆ ಎಂದರು.

ಶಿವಮೊಗ್ಗ ನಗರದ ಭಜರಂಗದಳ, ದ ಕಾಯ೯ಕತ೯ನನ್ನು ದುಷ್ಕರ್ಮಿಗಳು ಬಬ೯ರವಾಗಿ ಹತ್ಯೆ ಮಾಡಿದರು. ಆದರೆ ಸೌಜನ್ಯ ಕ್ಕಾದರೂ ಮನೆಗೆ ಭೇಟಿ ನೀಡುವ ಕೆಲಸ ಸಿದ್ದರಾಮಯ್ಯ ನವರು ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕುತ್ತಿರುವ ದೇಶದ್ರೋಹಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಾ,ವಾತಾವರಣವನ್ನು ಹದಗೆಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದು, ಜನರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಇನ್ನೂ 25 ವಷ೯ಗಳ ಕಾಲ ಇಡೀ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!