ಹಣೆಬರದಲ್ಲಿ ಸಿದ್ದರಾಮಯ್ಯ ಪಿಎಂ ಆಗುವದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: ವಿಶ್ವನಾಥ್

ಹೊಸದಿಗಂತ ವರದಿ, ಗದಗ:

ಸಿದ್ದರಾಮಯ್ಯ ಪ್ರಧಾನಮಂತ್ರಿ ಆಗಬೇಕು ಎಂದು ಅವರ ಹಣೆಯಲ್ಲಿ ಬರೆದಿದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದು ಮಾಜಿ ಸಚಿವ ಶೇಪರ್ಡ ಇಂಡಿಯಾ ಇಂಟರನ್ಯಾಷನಲ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್. ವಿಶ್ವನಾಥ ಅವರು ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವೇಗೌಡರು ಹರದನಹಳ್ಳಿ ಎಂಬ ಒಂದು ಪುಟ್ಟಹಳ್ಳಿಯಿಂದ ಬಂದವರು ಅವರು ಪ್ರಧಾನಿಮಂತ್ರಿ ಆಗುತ್ತೆನೆ ಎಂದು ಕನಸು ಕಂಡಿದ್ದರಾ?. ಪೊಲಿಟಿಕ್ಸ್ ಎನ್ನುವುದು ಅವಕಾಶವಿದ್ದಂತೆ. ಡೆಮಾಕ್ರಟಿಕ್ ಐಡಿಯಾಲಜಿನಲ್ಲಿ ಪೊಲಿಟಿಕ್ಸ್ ಸೇರಿಕೊಂಡಿರುವದರಿಂದ ಯಾವುದನ್ನೂ ತಳ್ಳಿಹಾಕುವದಕ್ಕೆ ಸಾಧ್ಯವಿಲ್ಲ. ಏನ್ ಬೇಕಾದರೂ ಆಗಬಹುದು ಎಂದು ಹೇಳಿದರು.

ಶೆಫರ್ಡ್ ಇಂಟರನ್ಯಾಷನಲ್ ಸಂಘಟನೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಪ್ರದಾನಿ ಮಂತ್ರಿ ಮಾಡುದಕ್ಕಾಗಿ ಬೆಳಗಾವಿಯಲ್ಲಿ ಸಮಾವೇಶ ಆಯೋಜಿಸಲಾಗಿದೇಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್. ವಿಶ್ವನಾಥ ಅವರು ಈಗಾಗಲೇ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರೀಯನಾಗುತ್ತನೆ ಪ್ರದಾನಿ ಖುರ್ಚಿಗಾಗಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಶೆಫರ್ಡ್ ಇಂಡಿಯಾ ಇಂಟರನ್ಯಾಷನಲ್ ಸಮಾಜದ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ ಎಚ್. ವಿಶ್ವನಾಥ ಅವರು ಹಿಂದೆ ನಾನು ಪಾರ್ಲಿಮೆಂಟ್ ಮೇಂಬರ್ ಆಗಿದ್ದೆ, ಮತ್ತೊಮ್ಮೆ ಆಗಬೇಕೆಂಬ ಆಸೆಯು ಇದೆ, ಅವಕಾಶ ಸಿಗಬೇಕು. ಹೆಸರು ಘೋಷಣೆ ಮುಂಚೆ ಹಲವಾರು ಹೆಸರು ಓಡಾಡುತ್ತಿರುತ್ತವೆ. ಆದರೆ, ಹೈಕಮಾಂಡ್ ಟಿಕೆಟ್ ಕೊಡುವುದು ಮಾತ್ರ ಒಬ್ಬರಿಗೆ. ಯತೀಂದ್ರ ಆದರೂ ಪರವಾಗಿಲ್ಲ ಯಂಗ್ ಸ್ಟಾರ್ ಇದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!