ಚೆನ್ನಮ್ಮಳ ಕಾಲಿನ ಧೂಳಿಗೂ ಯಾರೂ ಸಮ ಇಲ್ಲ: ಜಯಮೃತ್ಯುಂಜಯ ಶ್ರೀ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾರನ್ನೂ ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಕೆ ಮಾಡಬಾರದು, ಚೆನ್ನಮ್ಮಳ ಕಾಲಿನ ಧೂಳಿಗೂ ಸಹ ಯಾರೂ ಸಮ ಇಲ್ಲ ಎಂದು ಬಸವ ಜಯಮೃತ್ಯುಂಜಯ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆದ ‘ಗಾಂಧಿ ಭಾರತ’ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಭಾಷಣದ ವೇಳೆ ಪ್ರಿಯಾಂಕಾ ಗಾಂಧಿಯವರನ್ನ ಕಿತ್ತೂರು ರಾಣಿ ಚೆನ್ನಮ್ಮಳಿಗೆ ಹೋಲಿಕೆ ಮಾಡಿದ್ದರು.

ಈ ವಿಚಾರವಾಗಿ ಮಾತನಾಡಿದ ಶ್ರೀಗಳು, ಚೆನ್ನಮ್ಮ ಹಾಗೂ ಬ್ರಿಟಿಷರ ನಡುವೆ ಯುದ್ದದ ರೀತಿ ಆಗಿತ್ತು. ಬ್ರಿಟಿಷರನ್ನ ಹಿಮ್ಮೆಟ್ಟಿಸಿದ ಅಂಥ ವೀರರಾಣಿಗೆ ಯಾರನ್ನೂ ಹೋಲಿಕೆ ಮಾಡಬಾರದು ಎಂದು ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಗದಗನಲ್ಲಿ ಪಂಚಮಸಾಲಿ ವೀರ ಬಸವ ರಕ್ಷೆ ಅಭಿಯಾನ ಮುಂದುವರಿದಿದೆ. ಮೀಸಲಾತಿ ಹೋರಾಟದಲ್ಲಿ ಲಾಠಿ ಏಟು ತಿಂದವರ ಮನೆಗೆ ಶ್ರೀಗಳು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು.

ಸಿಎಂ ಸಿದ್ದರಾಮಯ್ಯ ನಮ್ಮ ಮೀಸಲಾತಿ ಹೋರಾಟ ಸಂವಿಧಾನ ವಿರೋಧಿ ಎಂದಿದ್ದಾರೆ. ಆ ಮೂಲಕ ಪಂಚಮಸಾಲಿ ಸಮುದಾಯವನ್ನು ಹೀಯಾಳಿಸುವ ಕೆಲಸ ಮಾಡಿದ್ದಾರೆ.ಅಧಿವೇಶನದಲ್ಲಿ ಮೀಸಲಾತಿ ನೀಡಲು ಆಗೋದಿಲ್ಲ ಅಂತಿದ್ದಾರೆ. ಹೀಗಾಗಿ 8 ನೇ ಹಂತದ ಹೋರಾಟ ಆರಂಭ ಮಾಡಲಾಗಿದೆ. ಹೋರಾಟದ ವೇಳೆ ಪೊಲೀಸರು ಸರ್ಕಾರದ ಕುಮ್ಮಕ್ಕಿನಿಂದ ಲಾಠಿಚಾರ್ಜ್ ಮಾಡಿದ್ದಾರೆ. ಆದರೆ ನಮ್ಮ ಸಮುದಾಯ ಇದಕ್ಕೆಲ್ಲ ಹೆದರುವುದಿಲ್ಲ. ಲಾಠಿ ಚಾರ್ಜ್ ಒಳಗಾದವರಿಗೆ ‘ಪಂಚಮಸಾಲಿ ವೀರ’ ಎನ್ನುವ ಬಸವ ರಕ್ಷಣೆ ನೀಡಲಾಗುತ್ತದೆ.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.ಲಾಠಿ ಚಾರ್ಜ್ ಮಾಡಿದವರಿಗೆ ಯಾವ ರೀತಿ ಅಸಹಕಾರ ನೀಡ್ಬೇಕು ಅಂತಾ ಹೇಳುತ್ತೇವೆ.ನಮ್ಮ ಮನಸ್ಸು ಗೆದ್ದು, ‌ಮೀಸಲಾತಿ ನೀಡುವವರಿಗೆ ಯಾವ ರೀತಿ ಸಹಕಾರ ಕೊಡ್ಬೇಕು.ಪ್ರತಿ ಹಳ್ಳಿಯಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಮಾಡುತ್ತೇವೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!