ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸವ ಜಯಂತಿ ಹಾಗೂ ರೇಣುಕಾಚಾರ್ಯರ ಜಯಂತಿಯನ್ನು ಒಟ್ಟಿಗೆ ಆಚರಿಸಲು ಸಾಣೇಹಳ್ಳಿ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದು, ಶರಣರು ಸಂತರ ಬದುಕಿಗೆ ಮಸಿ ಬಳಿಯೋ ಕೆಲಸ ಯಾರೂ ಮಾಡಬಾರದು ಎಂದು ಹೇಳಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಬಸವ ರೇಣುಕಾ ಜಯಂತಿಯನ್ನು ಒಟ್ಟಿಗೆ ಮಾಡುವುದಾಗಿ ಹೇಳಿದ್ದಾರೆ. ಅದನ್ನು ವಿರೋಧಿಸಿ ಸಾಣೇಹಳ್ಳಿ ಶ್ರೀಗಳು, ಹಲವರು ಈಗ ಹೊಸ ಪದ್ಧತಿಯನ್ನು ತರಲು ಹೊರಟಿದ್ದಾರೆ. ಬಸವ ಜಯಂತಿ , ರೇಣುಕಾ ಜಯಂತಿಯನ್ನು ಒಟ್ಟಿಗೆ ಮಾಡುವ ಮೂಲಕ ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕನೆಂದು ನೀವು ಒಪ್ಪುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಬಸವಣ್ಣ ಅವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳಲು ತಯಾರಿಲ್ಲದಾಗ ರೇಣುಕಾಚಾರ್ಯರನ್ನು ಮುಂದೆ ತರುವುದೇಕೆ? ಇದು ಬಸವಣ್ಣನವರಿಗೆ ಅವಮಾನ ಮಾಡಿದಂತೆ. ರೇಣುಕಾ ಜಯಂತಿಯನ್ನು ಹಿಂದಿನಂತೆ ಪ್ರತ್ಯೇಕವಾಗಿ ಮಾಡಲಿ, ಅದಕ್ಕೆ ವಿರೋಧವಿಲ್ಲ ಎಂದರು.