ಹೊಸ ದಿಗಂತ ವರದಿ, ಮಂಗಳೂರು:
ಕಾನೂನನ್ನು ಯಾರೂ ಕೂಡ ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಬಾರದು. ನೈತಿಕ ಪೊಲೀಸ್ ಗಿರಿ ನಡೆದಲ್ಲಿ ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಶಾಂತಿ ಸುವ್ಯವಸ್ಥೆ ಎಲ್ಲವೂ ಸರಿಯಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಲು ಜನತೆಯ ಸಹಕಾರವೂ ಅಗತ್ಯ ಎಂದರು.
ಸಲಾಂ ಆರತಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸದ್ಯ ಎಲ್ಲವೂ ಸರಿಯಿದೆ. ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಅದೆಲ್ಲವೂ ಆಗಿದೆ. ಅದನ್ನು ಬದಲಾಯಿಸಬೇಕು. ಕನಿಷ್ಠ ದೇವಾಲಯಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಯಾಗಬೇಕಾದ ಕೆಲಸ ಆಗದಿದ್ದಲ್ಲಿ ಮತ್ತೆ ಎಲ್ಲಿ ಆಗಬೇಕು ಎಂದು ಪ್ರಶ್ನಿಸಿದರು.