ಹೊಸದಿಗಂತ ವರದಿ, ಮಂಡ್ಯ :
ಮೈಷುಗರ್ ಸಕ್ಕರೆ ಕಾರ್ಖಾನೆಯನ್ನೂ ಯಾರೂ ಮುಟ್ಟಬಾರದು. ಬೇಕಿದ್ದರೆ ಹೊಸದಾಗಿ ಬೇರೆ ಕಾರ್ಖಾನೆಯನ್ನೂ ಮಾಡಲಿ ಎಂದು ಸಂಸದೆ ಸುಮಲತಾ ಎಚ್ಚರಿಕೆ ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆ ಬಗ್ಗೆ ಹಿಂದೆ ಭ್ರಷ್ಟಾಚಾರ ಆಗಿರುವುದು ಗೊತ್ತಿದೆ. ನೂರಾರು ಕೋಟಿ ನಷ್ಟವಾಗಿದೆ. ಎಷ್ಟೆ ದುಡ್ಡು ಹಾಕಿದರೂ ಕಾರ್ಖಾನೆ ಸರಿಯಾಗಿಲ್ಲ. ಹಾಗೇ ಬಿದ್ದಿತ್ತು. ನಾನು ಸಂಸದೆಯಾದ ಬಳಿಕ ಯಡಿಯೂರಪ್ಪ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಂಡ್ಯ ರೈತರ ಸಮಸ್ಯೆ, ಕಾರ್ಖಾನೆ ಸಮಸ್ಯೆ ಕುರಿತು ಮಾತನಾಡಿದ್ದೆ. ಅವರು ಮಾತು ಕೊಟ್ಟಂತೆ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 50 ಕೋಟಿ ರೂ. ನೀಡಿ ಕಾರ್ಖಾನೆ ಪ್ರಾರಂಭ ಮಾಡಿದರು ಎಂದರು.
ಈಗಿನ ಸರ್ಕಾರ ಸಹ 100 ಕೋಟಿ ಕೊಟ್ಟಿದೆ. ಇನ್ನೂ ಸಮರ್ಪಕವಾಗಿ ಕಬ್ಬು ಅರೆಯುತ್ತಿಲ್ಲ. ಮತ್ತೆ 500 ಕೋಟಿ ಹೊಸ ಕಾರ್ಖಾನೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದ ಅವರು, ಒಂದಲ್ಲ ಐದು ಕಾರ್ಖಾನೆ ಮಾಡಿ, ಮೈಷುಗರ್ ಕಾರ್ಖಾನೆ ಮಂಡ್ಯಕ್ಕೆ ಹೆಮ್ಮೆ ಇದ್ದಂತೆ. ಹಳೆಯ ಕಾರ್ಖಾನೆ ಏನು ಮಾಡ್ತೀರಾ, ಮತ್ತೆ ಕ್ಲೋಸ್ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಐತಿಹಾಸಿಕತೆ ಎಂಬ ಕಾರಣಕ್ಕೆ ಅದನ್ನು ಕಾಪಾಡಲು ಹೋರಾಟ ಮಾಡಿದ್ದು ವ್ಯರ್ಥನಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಭಾವನಾತ್ಮಕ ಸಂಬಂಧ ಇದೆ. 500 ಕೋಟಿಯನ್ನು ಈ ಕಾರ್ಖಾನೆಗೆ ಹಾಕಿ ಸರಿಪಡಿಸಿ. 500 ಕೋಟಿ ಬಜೆಟ್ ಇದ್ದಾಗ ಹಳೆಯದನ್ನು ಅಭಿವೃದ್ಧಿ ಮಾಡಿ, ಒಟ್ಟಾರೆ ಮೈಷುಗರ್ ಕಾರ್ಖಾನೆಯನ್ನು ಯಾರೂ ಟಚ್ ಮಾಡಬಾರದು. ಅದಕ್ಕೆ ಐತಿಹಾಸಿಕ ಮಹತ್ವ ಇದೆ ಎಂದು ಎಚ್ಚರಿಸಿದರು.
ಕೆ.ಆರ್.ಎಸ್.ನಲ್ಲಿ ಬೇರೆ ಪಾರ್ಕ್ ಮಾಡುತ್ತೀರಾ, ಎಷ್ಟೋ ಪ್ರಾಚೀನ ಕಾಲಾದ ದೇವಸ್ಥಾನ ಇವೆ. ಅಲ್ಲಿ ಕಟ್ಟಡ ಕಟ್ಟುತ್ತೀರಾ. ಜನ ಒಪ್ಪುತ್ತಾರಾ ಎಂದು ಪ್ರಶ್ನಿಸಿದರು.
ನಾನುಸಂಸದೆಯಾದಾಗಾ ಎರಡೂ ಕಾರ್ಖಾನೆ ಮುಚ್ಚಿದ್ದು, ಪಾಂಡುವಪುರ ಕಾರ್ಖಾನೆ ನಡೆಯುತ್ತಿದೆ. ಯಾವುದೇ ತೊಂದರೆ ಇಲ್ಲ. ಪಾಂಡವಪುರ ಕಾರ್ಖಾನೆಯನ್ನು ಖಾಸಗೀಕರಣ ನೀಡಿದ್ದಕ್ಕೆ ಸರಿಯಾಗಿ ನಡೆಯುತ್ತಿದೆ. ಮೈಷುಗರ್ ಕಾರ್ಖಾನೆ ಒ ಅಂಡ್ ಎಂಗೆ ಯಡಿಯೂರಪ್ಪ ಕೊಡೋಣ ಅಂದರೂ ಕೆಲವರು ವಿರೋಧ ವ್ಯಕ್ತಪಡಿಸಿದರು ಎಂದು ಅಂದಿನ ಸಂದರ್ಭವನ್ನು ವಿವರಿಸಿದರು.
ಮೈಷುಗರ್ ಕಾರ್ಖಾನೆ ಉಳಿಸಿಕೊಳ್ಳಬೇಕು. ಅದು ನಮ್ಮೆಲ್ಲರ ಜವಾಬ್ದಾರಿ. ಬೇರೆ ಜಾಗದಲ್ಲಿ ಗುರುತಿಸಿ ಸಾಫ್ಟ್‌ವೇರ್ ಪಾರ್ಕ್ ಕಟ್ಟಲಿ. ಈ ಜಾಗದಲ್ಲಿ ಮೈಷುಗರ್ ಕಾರ್ಖಾನೆಯೇ ಇರಲಿ. ಮೈಷುಗರ್ ಜಾಗದಲ್ಲಿ ಮಾಡೋದು ಏನಿದೆ? 150 ಕೋಟಿ ವೇಸ್ಟ್. ಮತ್ತೆ 500 ಕೋಟಿ ಅಂದರೆ ಅರ್ಥವೇನು ಎಂದು ಪ್ರಶ್ನಿಸಿದರು.