ದಿಗಂತ ವರದಿ ವಿಜಯಪುರ:
ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಗೆ ಯಾವ ಪಾರ್ಟಿಯವರಿಗೂ ಕರೆದಿಲ್ಲ. ಭಾರತ ಸರ್ಕಾರ ಮಂತ್ರಿ, ನನಗೂ ಕೂಡ ಕರೆದಿಲ್ಲ. ಅಲ್ಲಿ ಜಾಗವಿಲ್ಲ. ಆ ವಿಷಯ ಟ್ರಸ್ಟಿನ್‌ವರಿಗೆ ಸಂಬಂಧಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ತುಷ್ಟೀಕರಣ ಪರಾಕಾಷ್ಟೇಯಾಗಿದೆ.
ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಕನ್‌ಪ್ಯೂಜ್ ಆಗಿದೆ ಎಂದು ದೂರಿದರು.
ರಾಮ ಮಂದಿರ ವಿಷಯದಲ್ಲಿ ಕಾಂಗ್ರೆಸ್ ನವರಿಗೆ ಹೊಟ್ಟೆ ಕಿಚ್ಚು, ಆತಂಕ ಎಲ್ಲವೂ ಶುರುವಾಗಿದೆ. ಉದ್ಘಾಟನೆಗೆ ಹೋಗಬೇಕೋ, ಬೇಡವೋ ? ಎನ್ನುವ ಗೊಂದಲದಲ್ಲಿದ್ದಾರೆ ಎಂದರು.
ರಾಮ ಎನ್ನುವುದು ಕಾಲ್ಪನಿಕ ಎಂದು ಹೇಳಿದವರು, 25 ವರ್ಷದ ಹಳೆಯ ಕೇಸನ್ನು ತೆಗೆದು ಜನರನ್ನು ಅರೆಸ್ಟ್ ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಹೊಟ್ಟೆ ಕಿಚ್ಚು ಪಡುತ್ತಿದೆ. ಪಿಎಫ್‌ಐ ಡಿಜೆ ಹಳ್ಳಿ, ಕೆಜೆ ಹಳ್ಳಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಅದಕ್ಕೆ ಪತ್ರ ಬರೆಯುತ್ತಾರೆ. ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಮೊಘಲ ಸರ್ಕಾರ ನಡೆಸಬೇಕಂತಿರಾ ? ಮಾಡಿದ್ದೀರಾ ? ಐಎಸ್‌ಐ ಸರ್ಕಾರ ನಡೆಸಬೇಕಂತಿರಾ ? ರಾಹುಲ್ ಗಾಂಧಿ, ಸೋನಿಯಾಗಾಂಧಿ ಪ್ರೀತ್ಯಾಧಾರಕ್ಕೆ ? ಎಂದು ಅತ್ಯಂತ ತೀವ್ರವಾಗಿ ಖಂಡಿಸುವೆ ಎಂದರು.
ಸಿದ್ಧೇಶ್ವರ ಶ್ರೀಗಳು ಆದರ್ಶ ಸಂತರಾಗಿದ್ದರು. ಅವರ ನುಡಿ ನಮನಕ್ಕೆ ವೈಯಕ್ತಿಕ ಹಾಗೂ ಭಾರತ ಸರ್ಕಾರದ ಪರವಾಗಿ ಆಗಮಿಸಿರುವೆ ಎಂದು ಶ್ರೀಗಳಿಗೂ ನನಗೂ ವೈಯಕ್ತಿಕ ಅವಿನಾಭಾವ ಸಂಬಂಧವಿದೆ. ಸ್ವಾಮಿಗಳು ಜನಾನುರಾಗಿದ್ದರು ಎಂದರು.