ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಿಎಂಗೆ ಬೆಂಬಲ ನೀಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಒತ್ತಡಕ್ಕೆ ಮಣಿದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿರಬಹುದು.
ಈಗಷ್ಟೇ ಸಂದೇಶ ಬಂದಿದೆ. ಯಾವ ರೀತಿ ಅನುಮತಿ ನೀಡಲಾಗಿದೆ ಎಂಬುದನ್ನು ನೋಡಬೇಕು. ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ಗೆ ಕೊಡಲ್ಲ ಅನ್ನುವ ವಿಶ್ವಾಸ ಇತ್ತು. ಆದರೆ ಅವರು ಅನುಮತಿ ನೀಡಿದರು. ಕಾನೂನಾತ್ಮಕವಾಗಿ ನೋಡಿಕೊಳ್ಳುತ್ತೇವೆ. ರಾಜಭವನ ದುರುಪಯೋಗವಾಗುತ್ತಿದೆ. ದೆಹಲಿಯ ಒತ್ತಡವು ಪ್ರಾಸಿಕ್ಯೂಷನ್ಗೆ ಕೊಡುಗೆ ನೀಡಿರಬಹುದು. ಆರೋಪಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಅವರು, ಇದನ್ನು ದ್ವೇಷದ ಕೃತ್ಯವೆಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.