ದಿಗಂತ ವರದಿ ವಿಜಯಪುರ:
ನಾನು ವಿಜಯೇಂದ್ರನ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾಕೆಂದರೆ, ಮೊನ್ನೆ ಡಿ ಕೆ ಶಿವಕುಮಾರ ಹೇಳಿದ್ದಾರೆ. ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಎಂ ಎಲ್ ಎ ಆಗಿದ್ದೀಯಾ. ನೀವು ವಿಧಾನಸೌದ ಕಟ್ಟಿ ಹತ್ತಲು, ಕಾಂಗ್ರೆಸ್ ಕೊಟ್ಟ ಭಿಕ್ಷೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಇವರಿಬ್ಬರದ್ದು ಹೊಂದಾಣಿಕೆ ಇದೆ ಎಂಬುವದು ಒಪ್ಪಿಕೊಂಡಿದ್ದಾರೆ. ಅಂತವರ ಜೊತೆ ಹೊಂದಾಣಿಕೆ ಆಗುವದಿಲ್ಲ ಎಂದರು.
ಸಂಘದ ಹಿರಿಯರಾಗಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನನಗೆ ಒಬ್ಬ ಮೆಸೆಂಜರ್ ಅನ್ನು ಕೊಟ್ಟು ಕಳಿಸಿದ್ದರು ನಿನ್ನೆ. ಸ್ವಲ್ಪ ದಿನ ಸಮಾಧಾನದಿಂದ ಇರಲು ಹೇಳಿದ್ದಾರೆ, ಎಲ್ಲವೂ ಸರಿ ಮಾಡುವ ಭರವಸೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕರಿಗೆ ಸೂಕ್ತ ಗೌರವ ಕೊಡುವ ಕೆಲಸ ಮಾಡುವದಾಗಿ ಹೇಳಿದ್ದಾರೆ ಎಂದರು.
ನಾನು ಈಗ ಪಕ್ಷದ ವಿರುದ್ದ ಯಾವುದೇ ಹೇಳಿಕೆ ಕೊಡುವದಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಸಂದೇಶ ಕಳಿಸಿದ್ದಾರೆ ಜೊತೆಗೆ ಸಂಘದ ಹಿರಿಯರು ಕಿವಿಮಾತು ಹೇಳಿದ್ದಾರೆ ಎಂದರು.
ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮುಕ್ತ ಮಾಡಿ, ಬಿಜೆಪಿಯಲ್ಲಿ ನಿಷ್ಟಾವಂತ ರಾಜಕಾರಣಿಗಳಿಗೆ ಗೌರವ ಕೊಡುವ ಭರವಸೆ ನೀಡಿದ್ದಾರೆ. ನಾನು ಪಕ್ಷದ ಹಿರಿಯರು ಹಾಗೂ ಸಂಘದವರು ಹೇಳಿದಂತೆ ಕೇಳುವೆ ಎಂದರು.
ನಮ್ಮ ಪಾದಯಾತ್ರೆ ಯಾರದೇ ನೇತೃತ್ವದಲ್ಲಿ ಅಲ್ಲ. ಬಿಜೆಪಿ ಸಾಮೂಹಿಕ ನಾಯಕತ್ವ, ಯಾರು ಬರುವವರು ಬರಬಹುದು, ಬಿಡುವವರು ಬಿಡಬಹುದು. ನಾವೆಲ್ಲರೂ ಕೂಡಿ ಮಾಡುತ್ತೇವೆ, ಸಾಮೂಹಿಕ ನಾಯಕತ್ವದಲ್ಲಿ. ನಾವು ಬಿನ್ನಮತಿಯರಲ್ಲ, ಬಂಡಾಯಗಾರರಲ್ಲ ಎಂದರು.
ಬಿಜೆಪಿ ಪಕ್ಷವನ್ನು ಹೊಂದಾಣಿಕೆ ರಾಜಕಾರಣ ಎಂಬ ಶಾಪದಿಂದ ಮುಕ್ತ ಮಾಡಿ, ನಿಜವಾದ ಬಿಜೆಪಿ ಕಟ್ಟಬೇಕು ಅಂದು ಕೊಂಡಿರುವವರು. ನಮ್ಮನ್ನು ಭಿನ್ನಮತಿಯ, ಅಥವಾ ಬಂಡಾಯಗಾರರೆಂದು ಮಾಧ್ಯಮದವರು ದಯವಿಟ್ಟು ನಮ್ಮನ್ನು ಕರೆಯುವುದು ಬೇಡಾ. ನಮಗೆ ಬಂಡಾಯ ಎಂದು ನೀವು ಕರೆದರೆ ವಿಜಯೇಂದ್ರ ನಿಮಗೆ ಏನೋ ಪ್ಯಾಕೇಜ್ ಕೊಟ್ಡಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ ಎಂದರು.
ನಮ್ಮ ಗುಂಪಿಗೆ ಬಂಡಾಯಗಾರರೆನ್ನದೇ ಪಕ್ಷದ ವೃದ್ದಿಗಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು ಎಂದು ಕರೆಯಿರಿ. ನಮಗೆ ಯಾವುದೇ ಸಭೆ ಕರೆದರು ಒಬ್ನೊಬ್ಬರೇ ಹೊಗಿ ಕಾಂಪ್ರಮೈಸ್ ಆಗಲ್ಲ, ಎಲ್ಲರೂ ಒಟ್ಟಿಗೆ ಹೋಗುತ್ತೇವೆ ಎಂದರು.
ನಳೀನ್ ಕುಮಾರ್ ಕಟೀಲ್ ಅವರು ಸಹಿತ ಬರಬೇಕಿತ್ತು ಅವರಿಗೆ ಡೆಂಘೀ ಆದ ಕಾರಣ ಅವರು ಮೊನ್ನೆ ನಡೆದ ಸಭೆಗೆ ಬಂದಿಲ್ಲ. ನೀವು ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ದ ಎಂದಿದ್ದಾರೆ, ಜೊತೆಗೆ ಸಾಕಷ್ಟು ಜನರು ಕೂಡಾ ಕರೆ ಮಾಡಿದ್ದಾರೆ. ಮುಂದಿನ ಸಭೆಗೆ ಬಹಳಷ್ಟು ಜನ ಬರುತ್ತಾರೆ ಎಂದರು.
ಆಗ ನಮ್ಮದೇ ಟೀಮ್ ದೊಡ್ಡದಾಗಿ ನಿಷ್ಟಾಂವತ ಬಿಜೆಪಿ ಟೀಮ್ ಆಗುತ್ತದೆ. ಆಗ ಅನಿಷ್ಟರು ಕುರ್ಚಿ ಖಾಲಿಮಾಡಿಕೊಂಡು ಮನೆಗೆ ಹೋಗಬೇಕಾಗುತ್ತದೆ ಎಂದರು.
ನೀನೊಬ್ಬ ಅನಿಷ್ಟ, ಪಾರ್ಟಿಗೆ ಎಲ್ಲಾ ಲಗಾಡಿ ತೆಗೆದು ಆಯಿತು ಹೈಕಮಂಡ್ ಯಾಕೇ ಸುಮ್ಮನಿದ್ದರ ಗೊತ್ತಿಲ್ಲ ನಿನಗೆ ಯಾರು ಮುಸುವುದಿಲ್ಲ