ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಪೂರ್ಣಾವಧಿ ರಾಜಕಾರಣಿ ಎಂದು ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ಹೇಳಿದ್ದರು. ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಚಿತ್ರರಂಗದಿಂದ ದೂರವಾಗುತ್ತಿದ್ದಾರೆ ಎಂದರು. ಆದರೆ, ಈಗ ಚಿತ್ರರಂಗದಿಂದ ದೂರ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಸ್ಪಷ್ಟಪಡಿಸಬೇಕು. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನನಗೆ ಅನಿಸುತ್ತದೆ. ನಾನು ರಾಜಕೀಯ ಹಿನ್ನೆಲೆಯಿಂದ ಬಂದಿದ್ದರೂ ನನ್ನ ಮೇಲೆ ಹೆಚ್ಚು ಪ್ರೀತಿ ತೋರಿದವರು ಕನ್ನಡ ಚಿತ್ರರಂಗದ ಅಭಿಮಾನಿಗಳು. ನಾನು ಕೆಲವು ಚಿತ್ರಗಳಲ್ಲಿ ಮಾತ್ರ ನಟಿಸಿದ್ದೇನೆ ಆದರೆ ಜನರು ನನ್ನನ್ನು ಪ್ರೋತ್ಸಾಹಿಸಿದ್ದಾರೆ.
ಸಂಘಟನೆ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ. ನಾನು ಪ್ರತಿ ಹಳ್ಳಿಗೆ ಹೋದರು ನಟ ಎಂದೇ ನನ್ನನ್ನು ಗುರಿಸುತ್ತಾರೆ. ರಾಜಕೀಯದೊಂದಿಗೆ ನಿರೀಕ್ಷೆಗಳು ಮತ್ತು ಜವಾಬ್ದಾರಿಗಳು ಇವೆ. ಆದ್ದರಿಂದ ಅದರಲ್ಲಿ ಮುಂದುವರಿಸುತ್ತೇನೆ. ನಟನೆಯಿಂದ ಸಣ್ಣ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಅಷ್ಟೇ ಎಂದಿದ್ದಾರೆ ನಿಖಿಲ್.