ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭವಾಗಿ ಇದೀಗ 14 ದಿನಗಳು ಕಳೆದಿವೆ. ಯುದ್ಧದಲ್ಲಿ ಉಕ್ರೇನ್‌ನ ಯೋಧರು, ನಾಗರಿಕರು ಪ್ರಾಣತೆತ್ತಿದ್ದಾರೆ. ಈ ಮಧ್ಯೆ ಉಕ್ರೇನ್ ಅಧ್ಯಕ್ಷರ ಪತ್ನಿ ಒಲೆನಾ ಮಾಧ್ಯಮಗಳಿಗೆ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ.
ಮಾಧ್ಯಮಗಳಲ್ಲಿ ನನ್ನ ಮನವಿಯಿದೆ. ಉಕ್ರೇನ್‌ನಲ್ಲಿ ಏನಾಗುತ್ತಿದೆ ಎನ್ನುವುದನ್ನು ಇಂಚು ಇಂಚಾಗಿ ತೋರಿಸಿ. ಎಲ್ಲ ಸತ್ಯ ಜಗತ್ತಿನ ಕಣ್ಮುಂದೆ ಬರಲಿ. ಪುಟಿನ್ ಅವರನ್ನು ಈಗ ನಿಲ್ಲಿಸದಿದ್ದರೆ ಜಗತ್ತಿನ ಯಾವ ಜಾಗವೂ ಸುರಕ್ಷಿತ ಅಲ್ಲ, ಮುಂದೊಂದು ದಿನ ನಿಮ್ಮ ನಗರಕ್ಕೂ ಉಕ್ರೇನ್ ಪರಿಸ್ಥಿತಿ ಬರಬಹುದು, ನಿಮ್ಮ ನಗರಕ್ಕೂ ರಷ್ಯಾ ಪ್ರವೇಶಿಸಬಹುದು. ರಷ್ಯಾ ತಡೆಯಲು ನಮ್ಮ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ ಎಂದಿದ್ದಾರೆ.