ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಒಂದೇ ಕ್ಲಿಕ್ಕಿನಲ್ಲಿ ಹಲೋ ಅಂದರೆ ಸಾಕು ನಿಮಗೆ ಬೇಕಾದ ಆಹರ ನಿಮ್ಮ ಬಾಗಿಲಿಗೆ ಬಂದು ತಲುಪುತ್ತದೆ. Swiggy ಮತ್ತು Zomato ನಂತಹ ಆನ್‌ಲೈನ್ ಆಹಾರ ವಿತರಕ ಕಂಪನಿಗಳಿಂದಾಗಿ ಇಂದು 24X7 ಆರ್ಡರ್ ಮಾಡಿ ತಿನ್ನುವ ಪರಿಕಲ್ಪನೆಯು ಹೆಚ್ಚಾಗಿ ಚಾಲನೆಯಲ್ಲಿದೆ. ದೊಡ್ಡವರು ತಿನ್ನೋದಲ್ಲದೆ ತಮ್ಮ ಮಕ್ಕಳಿಗೂ ಇದೇ ಖಯಾಲಿಯನ್ನು ಅಭ್ಯಾಸ ಮಾಡಿಸುತ್ತಿದ್ದಾರೆ. ಇದಕ್ಕೆ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ತಾಯಂದಿರು ಮಕ್ಕಳಿಗೆ ತಮ್ಮ ಕೈ ರುಚಿಯನ್ನು ಮಾತ್ರ ಬಡಿಸುವಂತೆ ಸಲಹೆ ನೀಡಿದೆ.
ʻಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ ಮಕ್ಕಳಿಗೆ ನೀಡುವ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ ಕೇರಳ ಹೈಕೋರ್ಟ್. ಸ್ವಿಗ್ಗಿ ಮತ್ತು ಜೊಮ್ಯಾಟೊಗಳನ್ನು ಬಿಟ್ಟು ಮಕ್ಕಳಿಗೆ ತಾಯಂದಿರ ಕೈ ರುಚಿ ತೋರಿಸಬೇಕು ಎಂದು ನ್ಯಾಯಮೂರ್ತಿ ಪಿವಿ ಕಾನ್ಹಿಕೃಷ್ಣನ್ ಸಲಹೆ ನೀಡಿದ್ದಾರೆ. ಮಕ್ಕಳಿಗೆ ತಾಯಿಯ ಕೈಯಿಂದ ಅಡುಗೆ ಮಾಡುವ ಮಹತ್ವವನ್ನು ನ್ಯಾಯಾಧೀಶರು ಒತ್ತಿ ಹೇಳಿದರು. ಹೊರಾಂಗಣದಲ್ಲಿ ಆಟವಾಡಲು ಮಕ್ಕಳನ್ನು ಪ್ರೋತ್ಸಾಹಿಸಿ, ಜೊತೆಗೆ ಮನೆಯಲ್ಲಿಯೇ ರುಚಿಕರವಾಗಿ ಅಡುಗೆ ಮಾಡಿ ಮಕ್ಕಳಿಗೆ ನೀಡಿ ಎಂಬ ಆಸಕ್ತಿಕರ ಸಲಹೆಗಳನ್ನು ನೀಡಿದರು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಬೇಡಿ, ಸ್ವಿಗ್ಗಿ, ಜೊಮ್ಯಾಟೊದಲ್ಲಿ ಆರ್ಡರ್ ಮಾಡುವಂತೆ ಪ್ರೋತ್ಸಾಹಿಸಬೇಡಿ’ ಎಂದು ಸೂಚಿಸಿದರು.
ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಈ ಹೇಳಿಕೆ ನೀಡಿದ್ದಾರೆ. ಆದಷ್ಟು ಅಪ್ರಾಪ್ತರಿಗೆ ಮೊಬೈಲ್ ಕೊಡಬೇಡಿ ಎಂದು ಸೂಚಿಸಿದರು. ಅಗತ್ಯವಿದ್ದರೆ ಆಗಾಗ ಗಮನಿಸುತ್ತಿರಿ..ಫೋನಿನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ಮಕ್ಕಳ ಮೇಲೆ ಸೂಕ್ತ ನಿಗಾವಹಿಸಬೇಕು. ಇಲ್ಲದಿದ್ದಲ್ಲಿ ಸ್ಮಾರ್ಟ್ ಫೋನ್‌ನಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಎಚ್ಚರಿಸಿದರು.