ಅಯ್ಯೋ, ಸುಶಾಂತ್‌ ಮನೇನಾ? ಬೇಡಪ್ಪಾ ಬೇಡ ಅಂತಿದಾರೆ ಬಾಡಿಗೆದಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಶಾಂತ್ ಸಿಂಗ್ ರಜಪೂತ್…ಯಾವುದೇ ಪರಿಚಯ ಅಗತ್ಯವಿಲ್ಲದ ಹೆಸರು. ಈ ಬಾಲಿವುಡ್ ತಾರೆ ಜೂನ್ 14, 2020 ರಂದು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತೇ ಇದೆ. ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಸುಶಾಂತ್, ಅತಿ ಕಡಿಮೆ ಸಮಯದಲ್ಲಿ ಬಾಲಿವುಡ್ ನ ಸ್ಟಾರ್ ಹೀರೋಗಳಲ್ಲೊಬ್ಬರು ಎಂಬ ಇಮೇಜ್ ಸೃಷ್ಟಿಸಿಕೊಂಡವರು. ಇಂಡಸ್ಟ್ರಿಯಲ್ಲಿ ಸಾಲು ಸಾಲು ಆಫರ್ ಗಳನ್ನು ಪಡೆದು ಸ್ಟಾರ್ ಪಟ್ಟ ಗಳಿಸಿದ ಹೀರೋ.. ದಿಢೀರ್ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರೇಕ್ಷಕರನ್ನಷ್ಟೇ ಅಲ್ಲ ಸಿನಿಮಾ ತಾರೆಯರನ್ನೂ ಬೆಚ್ಚಿ ಬೀಳಿಸಿದೆ.

ಇದೀಗ ಸುಶಾಂತ್ ವಾಸವಾಗಿದ್ದ ಫ್ಲಾಟ್ ಈಗ ಹಾಟ್ ಟಾಪಿಕ್ ಆಗಿದೆ. ನಿವೇಶನ ಇನ್ನೂ ಖಾಲಿ ಇರುವುದೇ ಇದಕ್ಕೆ ಕಾರಣ. ಸುಶಾಂತ್ ಸಾವಿನ ನಂತರ ಯಾರೂ ಆ ಮನೆಗೆ ಕಾಲಿಡಲು ಆಸಕ್ತಿ ತೋರುತ್ತಿಲ್ಲ. ಎರಡೂವರೆ ವರ್ಷಗಳಿಂದ ಸುಶಾಂತ್ ಮನೆ ಖಾಲಿ ಇದೆ. ಆ ಮನೆಯನ್ನು ಬಾಡಿಗೆ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸ್ವತಃ ರಿಯಲ್ ಎಸ್ಟೇಟ್ ಬ್ರೋಕರ್ ರಫೀಕ್ ಮರ್ಚೆಂಟ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮೊದಲು ಮನೆಯನ್ನು ನೋಡಲೂ ಬರುತ್ತಿರಲಿಲ್ಲ, ಈಗ ಸ್ವಲ್ಪ ಸುಧಾರಿಸಿದೆ ಎಂದರು.

ರಿಯಲ್ ಎಸ್ಟೇಟ್ ಬ್ರೋಕರ್ ರಶೀದ್ ಈ ದುಬಾರಿ ಫ್ಲಾಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಮಾಸಿಕ ಬಾಡಿಗೆ 5 ಲಕ್ಷ ರೂ. ಈ ಹಿಂದೆ ಈ ಫ್ಲಾಟ್ ನೋಡಲು ಸಹ ಸಿದ್ಧರಿರಲಿಲ್ಲ, ಆದರೆ ಈಗ ಕನಿಷ್ಠ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಈ ಪ್ಲಾಟ್‌ ಓರ್ವ ಎನ್‌ಆರ್‌ಐ ಅವರದಾಗಿದ್ದು, ಬಾಡಿಗೆಯನ್ನು ಕಡಿಮೆ ಮಾಡಲು ಬಯಸುವುದಿಲ್ಲ ಎಂದರು. ಸಿನಿಮಾ ತಾರೆಯರಿಗೆ ಫ್ಲಾಟ್ ಬಾಡಿಗೆ ನೀಡಲು ಮನೆಯ ಮಾಲೀಕರು ಸಿದ್ಧರಿಲ್ಲ ಎಂಬುದನ್ನೂ ತಿಳಿಸಿದ್ದಾರೆ. ಕೆಲವರು ಮನೆ ಬಾಡಿಗೆಗೆ ಪಡೆಯಲು ಆಸಕ್ತಿ ಹೊಂದಿದ್ದರೂ ಕೂಡ ಅವರ ಕುಟುಂಬ ಸದಸ್ಯರು ಸುಶಾಂತ್ ಸತ್ತ ಸ್ಥಳದಲ್ಲಿ ಉಳಿಯಲು ಒಪ್ಪುತ್ತಿಲ್ಲ ಅಂತಿದಾರೆ.

ಇದು 4BHK ಪ್ಲಾಟ್ ಆಗಿದೆ. ಸಮುದ್ರದ ಸಮೀಪವಿರುವ ಈ ಐಷಾರಾಮಿ ಪ್ಲಾಟ್‌ಗೆ ಸುಶಾಂತ್ ಸಿಂಗ್ ರಜಪೂತ್ ಮಾಸಿಕ 4.5 ಲಕ್ಷ ಬಾಡಿಗೆ ಪಾವತಿಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!