ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದಿದ್ದಾರೆ. ವಿಧಾನಸಭೆಯಲ್ಲಿ ಅವರ ಪಕ್ಷಕ್ಕೆ ನೀಡಿದ 21 ಕ್ಷೇತ್ರಗಳಲ್ಲಿ 21 ಕ್ಷೇತ್ರ, ಲೋಕಸಭೆಯಲ್ಲಿ ನೀಡಿದ ಎರಡಕ್ಕೆ ಎರಡು ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಎನ್‌ಡಿಎ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಗೆಲುವಿನಿಂದ ಪವನ್ ಕಲ್ಯಾಣ್ ಖುಷಿಯಾಗಿದ್ದಾರೆ. ಅವರ ಪ್ರಕಾರ ಎನ್‌ಡಿಎ .
ಸಂದರ್ಶನದಲ್ಲಿ ಪವನ್ ಕಲ್ಯಾಣ್, “ಪ್ರಧಾನಿ ಮೋದಿ ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ, ಮೈತ್ರಿಕೂಟ ತೊರೆಯುವ ಮಾತೇ ಇಲ್ಲ” ಎಂದು ಪವನ್ ಕಲ್ಯಾಣ್ ಸ್ಪಷ್ಟಪಡಿಸಿದ್ದಾರೆ.
“ಇದು ಐತಿಹಾಸಿಕ ತೀರ್ಪಿನ ದಿನ. ಆಂಧ್ರಪ್ರದೇಶದ ಜನರಿಗೆ ಜವಾಬ್ದಾರಿಯುತ ಆಡಳಿತ ನೀಡಲು ನಾವು ಬದ್ಧರಾಗಿದ್ದೇವೆ. ಇದನ್ನು ಎನ್ ಡಿಎ ಸರ್ಕಾರ ಗೌರವಿಸುತ್ತದೆ” ಎಂದು ಪವನ್ ಕಲ್ಯಾಣ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಪವನ್ ಕಲ್ಯಾಣ್ ಸದ್ಯ ಮೊದಲ ಗೆಲುವಿನ ಖುಷಿಯಲ್ಲಿದ್ದಾರೆ.