ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ದೊಡ್ಮನೆಯೊಳಗೆ ಇದ್ದಾಗ ಇತರೆ ಕಂಟೆಸ್ಟೆಂಟ್ಸ್‌ಗಳು ಕಾರ್ತಿಕ್‌ಗೆ ಹೊರಗಡೆ ಗರ್ಲ್‌ಫ್ರೆಂಡ್ ಇದ್ದಾರೆ ಎಂದು ಸಾಕಷ್ಟು ಬಾರಿ ಹೇಳಿದ್ದರು.
ಈ ಬಗ್ಗೆ ಕಾರ್ತಿಕ್ ಸ್ಪಷ್ಟನೆ ನೀಡಿದ್ದು, ನನಗೆ ಯಾವ ಗರ್ಲ್‌ಫ್ರೆಂಡ್ ಕೂಡ ಇಲ್ಲ ಎಂದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ನನಗೆ ಗರ್ಲ್‌ಫ್ರೆಂಡ್ ಮಾಡಿಕೊಳ್ಳೋದಕ್ಕೆ ಇಷ್ಟ ಇರಲಿಲ್ಲ. ಅದಕ್ಕಾಗಿ ಈ ರೀತಿ ಸುದ್ದಿ ಹಬ್ಬಿಸಲಾಗಿತ್ತು. ನಿಜವಾಗಿಯೂ ಯಾರೂ ಗರ್ಲ್‌ಫ್ರೆಂಡ್ ಇಲ್ಲ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಸಂಗೀತಾ ಜೊತೆ ತುಂಬಾ ಕ್ಲೋಸ್ ಆಗಿದ್ದರು. ನಂತರ ನಮ್ರತಾ ಜೊತೆ ಕ್ಲೋಸ್ ಆಗಿದ್ದರು. ಇದೀಗ ಕಾರ್ತಿಕ್ ನನಗೆ ಗರ್ಲ್‌ಫ್ರೆಂಡ್ ಬಗ್ಗೆ ತಲೆಕೆಡಿಸಿಕೊಳ್ಳೋದಕ್ಕೆ ಟೈಮ್ಗ ಇಲ್ಲ. ತುಂಬಾ ಕೆಲಸ ಇದೆ, ಕನಸುಗಳಿವೆ ಅವುಗಳನ್ನು ಮಾಡ್ತೇನೆ ಎಂದು ಹೇಳಿದ್ದಾರೆ.