ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸದ್ಯಕ್ಕೆ ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪ್ರಸ್ತಾವನೆ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮತ್ತು ಸಂಶೋಧನಾ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕೇವಲ 2 ಕೋಟಿ ದುಡ್ಡಿಟ್ಟು ವಿಶ್ವವಿದ್ಯಾಲಯ ಮಾಡಿದರು ಹೊಸ ವಿಶ್ವವಿದ್ಯಾಲಯಗಳನ್ನು ಮಾಡಬೇಕಾದರೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯ ಶುರು ಮಾಡುವಾಗ 1,200 ಎಕ್ರೆ ಭೂಮಿ ಇತ್ತು.ಮೈಸೂರು ವಿಶ್ವವಿದ್ಯಾಲಯ ಅಂತ ಹೇಳಿದರೆ ಒಂದು ಹೆಸರಿದೆ. ನಮಗೆಲ್ಲ ಮೈಸೂರು ವಿಶ್ವವಿದ್ಯಾಲಯ ಅಂದರೆ ಹೆಮ್ಮೆ ಇದೆ. ಹೊಸ ವಿಶ್ವವಿದ್ಯಾಲಯಗಳಿಗೆ ಹೋಗಲು ಸಿಬ್ಬಂದಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆಯಾಗಿತ್ತು.ಅವರು ವರದಿ ಕೊಟ್ಟರು. ವರದಿ ಆಧಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಈ ಕುರಿತು ಚರ್ಚೆ ಆಯಿತು. ರಾಜಕೀಯ ಲಾಭಕ್ಕಾಗಿ ಒಂದಷ್ಟು ಜನ ಪ್ರೊಟೆಸ್ಟ್ ಮಾಡಬಹುದು. ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚೋಕೆ ಆಗಲ್ಲ ಎಂದರು.