ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 26 ಶುಕ್ರವಾರದಂದು ದಕ್ಷಿಣ ರಾಜ್ಯಗಳಲ್ಲಿ ಮತದಾನ ನಿಗದಿ (Lok Sabha Election) ಮಾಡಿರುವುದು ಸರಿಯಿಲ್ಲ. ಇಲ್ಲೆಲ್ಲ ಚುನಾವಣೆ ದಿನಾಂಕವನ್ನು ಪರಿಷ್ಕರಿಸಬೇಕು ಎಮದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಚುನಾವಣಾ ಆಯೋಗವನ್ನು (ECI) ಒತ್ತಾಯಿಸಿದೆ.
ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಚುನಾವಣಾ ಆಯೋಗಕ್ಕೆ ಜಂಟಿ ಪತ್ರ ಬರೆದಿದ್ದು, ಮುಸ್ಲಿಂ ಮತದಾರರಿಗೆ ಆ ದಿನ ಆಗುವ ತೊಂದರೆಗಳನ್ನು ಉಲ್ಲೇಖಿಸಿ ಮತದಾನದ ದಿನವನ್ನು ಏಪ್ರಿಲ್ 26 ರಿಂದ ಬದಲಾಯಿಸುವಂತೆ ವಿನಂತಿಸಿದ್ದಾರೆ.
ಶುಕ್ರವಾರ ಅಥವಾ ಭಾನುವಾರ ಚುನಾವಣೆಗಳನ್ನು ನಡೆಸುವುದರಿಂದ ಮತದಾರರಿಗೆ ಮತ್ತು ಮತಗಟ್ಟೆ ಅಧಿಕಾರಿಗಳು ಮತ್ತು ಬೂತ್ ಏಜೆಂಟರಿಗೆ ಗಮನಾರ್ಹ ಅನಾನುಕೂಲತೆ ಉಂಟಾಗಬಹುದು .
ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಕೇರಳದಲ್ಲಿ, ಶುಕ್ರವಾರ (ಇಸ್ಲಾಂ) ಮತ್ತು ಭಾನುವಾರ (ಕ್ರಿಶ್ಚಿಯನ್ನರಿಗೆ) ವಿವಿಧ ಸಮುದಾಯಗಳಿಗೆ ಅನಾನುಕೂಲವಾಗುತ್ತದೆ. ಆದ್ದರಿಂದ ಮತದಾನದ ದಿನಾಂಕವನ್ನು ಬದಲಾಯಿಸಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ಹಸನ್ ತಿಳಿಸಿದ್ದಾರೆ.