ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಏನಾದರೂ ಇದ್ದರೆ ಸಿದ್ದರಾಮಯ್ಯರಿಗೆ ನೀಡಬೇಕು: ಕೆ.ಎಸ್. ಈಶ್ವರಪ್ಪ

ಹೊಸ ದಿಗಂತ ವರದಿ,ಹುಬ್ಬಳ್ಳಿ:

ಜಾತಿ ಗಣತಿ ವರದಿ ಜಾರಿಗೊಳಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಪದೇ ಪದೇ ಸುಳ್ಳು ಹೇಳುತ್ತಿದ್ದು, ಸುಳ್ಳು ಹೇಳುವುದಕ್ಕೆ ನೋಬೆಲ್ ಪ್ರಶಸ್ತಿ ಕೊಡುವುದು ಏನಾದರೂ ಇದ್ದರೆ ಅವರಿಗೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಇದ್ದಾಗ ನಾವು ಸಹ ಸದನದಲ್ಲಿ ಜಾತಿಗಣತಿ ಜಾರಿಗೊಳಿಸಲು ಒತ್ತಾಯ ಮಾಡಿದ್ದೇವು. ಆದರೆ ಮಾಡಲಿಲ್ಲ. ಆದ್ದರಿಂದ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬಂದಿತ್ತು. ಆಗಲೂ ಕುಮಾರಸ್ವಾಮಿ ಅವರ ಬೇಡಾ ಅಂತಿದ್ದಾರೆ ಎಂದು ಅವರ ಮೇಲೆ ಆರೋಪ ಮಾಡಿದರು ಎಂದರು.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಕಾರಕ್ಕೆ ಬಂದು ಅವರೇ ಸಿಎಂ ಆಗಿದ್ದಾರೆ. ಎಲ್ಲ ಮಠಾಶರು ಸಹ ಅವರನ್ನು ಭೇಟಿಯಾಗಿ ಜಾತಿ ಗಣತಿ ವರದಿ ಜಾರಿಗೊಳಿಸಲು ಮನವಿ ಮಾಡಿದಾಗ ನವೆಂಬರ್‌ನಲ್ಲಿ ಮಾಡುವುದಾಗಿ ಭರವಸೆ ನೀಡಿದರು. ಆದರೆ ಈಗಲೂ ಇಲ್ಲದ ಸಲ್ಲದ ನೆಪ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.ಸಿದ್ದರಾಮಯ್ಯ ನಿಸ್ಸಿಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಒಡೆಯುವುದಲ್ಲಿ ನಿಸ್ಸಿಮರಾಗಿದ್ದಾರೆ. ಇದನ್ನು ಮಾಡುವುದರಲ್ಲಿ ಯಶಸ್ವಿಯಾಗಿದ್ದೇವೆ ಎಂದುಕೊಂಡಿದ್ದಾರೆ. ಸ್ವತಃ ಅವರ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಈ ಮಾತು ಹೇಳುತ್ತಿದ್ದಾರೆ. ಆದರೆ ಈ ವಿಚಾರಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ತಾತ್ಕಾಲಿಕ ಯಶಸ್ಸು ಕಾಣಬಹುದು ಎಂದರು.

ಬಚ್ಚಾ ಪ್ರಿಯಾಂಕ: ಡಿಸಿಎಂ ಡಿ.ಕೆ. ಶಿವಕುಮಾರ, ಸತೀಶ ಜಾರಕಿಹೊಳಿ ಹಾಗೂ ಬಚ್ಚಾ ಪ್ರಿಯಾಂಕ ಖರ್ಗೆ ಅವಕಾಶ ಸಿಕ್ಕರೆ ನಾನೆ ಸಿಎಂ ಎಂದು ಹೇಳಿಕೊಂಡು ಅಲೆದಾಡುತ್ತಿದ್ದಾರೆ. ಸಾರ್ವಕರ್ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿ ಪ್ರಿಯಾಂಕ ಖರ್ಗೆ ಇದ್ದಾರೆ ಎಂದು ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!