ಹೊಸದಿಗಂತ ಡಿಜಿಟಲ್ ಡೆಸ್ಕ್:
ನೋಯ್ಡಾದ ಸೆಕ್ಟರ್ 39 ನಲ್ಲಿರುವ ಸರ್ಕಾರಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ಇನ್ವರ್ಟರ್ ಬ್ಯಾಟರಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಎಂಟು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದವು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕೆ ಚೌಬೆ ತಿಳಿಸಿದ್ದಾರೆ.
“ಅಗ್ನಿಶಾಮಕ ಸೇವಾ ಘಟಕವು ನಿಯಂತ್ರಣ ಕೊಠಡಿಯ ಮೂಲಕ ಸೆಕ್ಟರ್ 39 ರ ಸರ್ಕಾರಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ಪಡೆದರು. ತಕ್ಷಣವೇ, ನಾವು 8 ವಾಹನಗಳನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ. ಬೆಂಕಿಯಿಂದಾಗಿ, ಮೊದಲ ಮಹಡಿ ತುಂಬೆಲ್ಲಾ ಆವರಿಸಿದೆ. ವೈದ್ಯರು ತಕ್ಷಣವೇ 25 ರೋಗಿಗಳನ್ನು ಮೊದಲ ಮಹಡಿಯಿಂದ ತುರ್ತು ಚಿಕಿತ್ಸಾ ವಿಭಾಗ ಮತ್ತು ಐಸಿಯುಗೆ ಸ್ಥಳಾಂತರಿಸುವ ಮೂಲಕ ಅತ್ಯುತ್ತಮವಾದ ಕೆಲಸ ಮಾಡಿದರು,” ಎಂದು ಚೌಬೆ ಹೇಳಿದರು.