ಸೀಮಾ ಹೈದರ್​ ಲವ್‌ ಸ್ಟೋರಿಗೆ ಸಹಾಯ ಮಾಡಿದ ಇಬ್ಬರು ಆರೋಪಿಗಳು ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಬ್​ಜಿ ಮೂಲಕ ಪ್ರೀತಿಸಿದ ಯುವಕನಿಗಾಗಿ ಭಾರತಕ್ಕೆ ಅನಧಿಕೃತವಾಗಿ ಪ್ರವೇಶಿಸಿರುವ ಸೀಮಾ ಹೈದರ್​ಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟಿರುವ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ನೋಯ್ಡಾ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಂಧಿತರನ್ನು ಉತ್ತರಪ್ರದೇಶ ಮೂಲದ ಪುಷ್ಪೇಂದ್ರ ಮತ್ತು ಪವನ್​ ಎಂದು ಗುರುತಿಸಲಾಗಿದೆ. ಅವರನ್ನು ಬಂಧಿಸುವ ವೇಳೆ 15 ನಕಲಿ ಆಧಾರ್​ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಮೂರು ದಿನಗಳಿಂದ ಇಬ್ಬರು ಆರೋಪಿಗಳನ್ನು ನಿರಂತರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಅವರು ದೊಡ್ಡ ಮಟ್ಟದ ನಕಲಿ ದಾಖಲೆಗಳ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ.

​ಬಂಧಿ ಆರೋಪಿಗಳು ಉತ್ತರ ಪ್ರದೇಶದ ಬುಲಂದ್​ಶಹರ್​ ಜಿಲ್ಲೆಯ ಅಹಮದಗಢದಲ್ಲಿ ಜನಾ ಸೇವಾ ಕೇಂದ್ರ ನಡೆಸುತ್ತಿದ್ದರು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು. ಇದನ್ನು ಅರಿತ ಸಚಿನ್ ಮೀನಾ ಮತ್ತು ಸೀಮಾ ಹೈದರ್ ತಮ್ಮ ಮದುವೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಪಡೆಯಲು ಇಬ್ಬರ ನೆರವು ಕೋರಿದರು. ಪೊಲೀಸರ ತನಿಖೆಯ ವೇಳೆ, ಆರೋಪಿಗಳಿಬ್ಬರು ನಕಲಿ ಆಧಾರ್ ಕಾರ್ಡ್‌ಗಳನ್ನು ರಚಿಸುತ್ತಿದ್ದರು ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ. ಅಲ್ಲದೆ ಇದಕ್ಕೆ ಬಳಸುತ್ತಿದ್ದ ಸಾಧನವನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಪ್ರಕರಣ?

2019ರಲ್ಲಿ ಕೋವಿಡ್‌ ವೇಳೆ ಆನ್​ಲೈನ್​ ಗೇಮ್​ ಪಬ್​ಜಿ ಮುಖಾಂತರ 30 ವರ್ಷದ ಸೀಮಾ ಮತ್ತು 22 ವರ್ಷದ ಸಚಿನ್​ ಮೀನಾ ಇಬ್ಬರೂ ಪರಿಚಯಗೊಂಡಿದ್ದು, ಈ ವರ್ಷದಲ್ಲಿ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ.

ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಆರೋಪದ ಮೇಲೆ ಸೀಮಾಳನ್ನು ಮತ್ತು ಆಕೆಗೆ ಆಶ್ರಯ ಕೊಟ್ಟ ಆರೋಪದ ಮೇಲೆ ಸಚಿನ್​ ಮತ್ತು ಆತನ ತಂದೆಯನ್ನು ಜುಲೈ 4ರಂದು ಬಂಧಿಸಲಾಗಿತ್ತು. ಮೂವರಿಗೂ ಜಾಮೀನು ದೊರೆತ ಹಿನ್ನೆಲೆ ಜುಲೈ 7ರಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!