ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಆರೋಪಿ ದರ್ಶನ್ ಗೆ ಇಂದು ಮಾಂಸಾಹಾರ ನೀಡಲಾಗುವುದು.
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಎರಡನೇ ಮತ್ತು ಕೊನೆಯ ಶುಕ್ರವಾರ ಕೈದಿಗಳಿಗೆ ಮಟನ್ ಊಟ ನೀಡಲಾಗುತ್ತದೆ. ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರದಂದು ಚಿಕನ್ ಅನ್ನು ಸಹ ನೀಡಲಾಗುತ್ತದೆ. ಅದರಂತೆ ಇಂದು ಸಂಜೆ 90 ಗ್ರಾಂ ಮಟನ್ ಊಟ ಕೂಡ ದರ್ಶನ್ ಸ್ವೀಕರಿಸಲಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಮತ್ತು ತಂಡದ ಬಂಧನ ಅವಧಿಯನ್ನು ಸೆ.9ರವರೆಗೆ 24ನೇ ಎಸಿಎಂಎಂ ನ್ಯಾಯಾಲಯ ಗುರುವಾರ ವಿಸ್ತರಿಸಿದೆ.